ರೈತರ ಸಮಸ್ಯೆಗಳ ಕೇಳುವರಿಲ್ಲ

04 YERRISWAMY 01
Published on

ಬಳ್ಳಾರಿ : ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಕೇಳುವುದಿಲ್ಲ. ಆದ್ದರಿಂದಲೇ ರೈತರ ಸಮಸ್ಯೆಗಳು ಹಾಗೇಯೆ ಉಳಿದಿವೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಐ. ಹೊನ್ನೂರಾಲಿ ಹೇಳಿದರು.
ನಗರದ ಎಸ್‌ಎಸ್‌ಎ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಬುಧವಾರ ನಡೆದ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ರಾಜಕೀಯ ಮತ್ತು ಅರ್ಥಿಕ ಪ್ರಶ್ನೆಗಳು ಸಂವಾದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಸಮಸ್ಯೆಗಳಿಗೆ ಕೇವಲ ರೈತರೇ ಕಾರಣರಲ್ಲ, ಇದರ ಹಿಂದೆ ಸಾಕಷ್ಟು ನೈಸರ್ಗಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿವೆ. ರೈತರ ಪರವಾಗಿ ಮಾತನಾಡುವ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಇಲ್ಲದಂತೆಯಾಗಿದೆ. ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳು ಎರಡೂ ಅಂತರ್ಗತ ಸಂಬಂಧ ಹೊಂದಿವೆ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಎಚ್.ಕೆ. ಮಂಜುನಾಥರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಾತಾವರಣ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಪಡೆಯಲು ರೈತರು ಹರಸಾಹಸ ಪಡಬೇಕಿದೆ. ರೈತರ ಪರವಾಗಿ ನಿಲ್ಲಬೇಕಾದವರು ಕೇವಲ ಆಶ್ವಾಸನೆಗಳನ್ನು ನೀಡುತ್ತಿದ್ದರೆ ಎಂದರು.
ಪ್ರಮುಖರಾದ ಪರೀಕ್ಷಾ ನಿಯಂತ್ರಕಿ ಶೋಭಾರಾಣಿ, ಪ್ರೊ. ರಾಮಾಂಜನೇಯ, ಡಾ. ಹುಚ್ಚೂಸಾಬ್, ಕೆ.ಎನ್. ರಾಮಾಂಜನೇಯ, ಟಿ. ದುರುಗಪ್ಪ, ಎನ್. ಗಂಟೆಪ್ಪ ಶೆಟ್ಟಿ, ಬಿ. ಶ್ರೀನಿವಾಸರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net