

ಬೋರಗಾಂವ: ಸಾಮಾಜಿಕ ಬದ್ಧತೆ ಮೂಲಕ ಸಹಕಾರ ಕ್ಷೇತ್ರದಲ್ಲಿ ಸದಸ್ಯರು ಹಾಗೂ ರೈತರ ಅಭಿವೃದ್ಧಿ ಸಾಧ್ಯ ಎಂದು ತೋರಿಸಿದ ದಿ.ರಾವಸಾಹೇಬ ಪಾಟೀಲ ಅವರ ಆದರ್ಶದಿಂದ ಅರಿಹಂತ ಪರಿವಾರದ ಪರವಾಗಿ ಸದಸ್ಯರು ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದು ಯುವ ಧುರೀಣ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಸಂಘದ ಸಾಲಗಾರ ಸದಸ್ಯ ಬಾಳಾಸೊ ಹಾವಲೆ ಇವರ ಅಪಘಾತ ಮತ್ತು ರೋಹಿದಾಸ ವಾಸವಾಡೆ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ವಾರಸುದಾರರಿಗೆ ಆರೋಗ್ಯ ವಿಮೆ ಮತ್ತು ಡಿಆರ್‌ಸಿಸಿ ವಿಮೆ ಯೋಜನೆಯಿಂದ ತಲಾ ೧ ಲಕ್ಷ ರೂ. ನೀಡಿ ಮಾತನಾಡಿ, ಪ್ರಾಥಮಿಕ ಗ್ರಾಮೀಣ ಕೃಷಿ, ಸಹಕಾರಿ ಪರವಾಗಿ, ಸದಸ್ಯರ ಕಲ್ಯಾಣಕ್ಕಾಗಿ ಆರೋಗ್ಯ ವಿಮೆ ಮತ್ತು ಅಪಘಾತ ವಿಮೆ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಸಿಇಒ ಆರ್.ಟಿ.ಚೌಗುಲಾ ಮಾತನಾಡಿದರು. ಉದ್ಯಮಿ ಅಭಿನಂದನ ಪಾಟೀಲ, ಉಪಾಧ್ಯಕ್ಷ ಸುಮಿತ ರೋಡ್ಡ, ನಿರ್ದೇಶಕ ಪ್ರವೀಣ ಪಾಟೀಲ, ರಾಜೇಂದ್ರ ಐದಮಾಳೆ, ಪ್ರದೀಪ ಮಾಳಿ, ಅಶೋಕ ಮಾಳಿ, ರಾಜೇಂದ್ರ ಪಾಟೀಲ, ಪ್ರಜಕ್ತಾ ಪಾಟೀಲ, ಸುನಿತಾ ಬಂಕಾಪುರೆ, ದರ್ಶನ ಪಾಟೀಲ, ಸುರೇಶ ಬಂಕಾಪುರೆ, ರಾಜು ಗಜರೆ, ಶಿವಾಜಿ ತೋಡ್ಕರ, ರಾಕೇಶ ಫಿರಗನ್ನವರ ಇತರರಿದ್ದರು.