ರೈತರ ಬೆಳೆಗಳು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವಂತಾಗಬೇಕು

12 ckm 1
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿಜಯಸಂಕೇಶ್ವರ ದಂಪತಿ ಉದ್ಘಾಟಿಸಿದರು. ಶ್ರೀ ರಂಭಾಪುರಿ ಸ್ವಾಮೀಜಿ, ಡಾ. ಕವಿತಾ ಮಿಶ್ರ, ಟಿ.ಡಿ.ರಾಜೇಗೌಡ, ಜಿ.ಎಸ್.ಪಾಟೀಲ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಮ್ಮ ದೇಶದ ರೈತರು ಬೆಳೆದ ಬೆಳೆಗಳು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಮಾರಾಟವಾದಾಗ ಮಾತ್ರ ನಮ್ಮ ದೇಶದ ರೈತರಿಗೆ ಹೆಚ್ಚು ಲಾಭವಾಗಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳ ಉತ್ಪಾದನೆಗೆ ಮುಂದಾಗಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಕರೆ ನೀಡಿದರು.

ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬೆಳೆಯುವ ವಸ್ತುಗಳಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿದೆ ಎಂಬ ಕಾರಣಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ನಮ್ಮ ವಸ್ತುಗಳು ತಿರಸ್ಕೃತವಾಗುತ್ತಿವೆ. ರೈತರು ಇದಕ್ಕೆ ಅವಕಾಶವಾಗದಂತೆ ರಾಸಾಯನಿಕ ಮುಕ್ತ ಆಹಾರ ವಸ್ತುಗಳ ತಯಾರಿಕೆಗೆ ಮುಂದಾಗಬೇಕು ಎಂದು ಹೇಳಿದೆ.

ಈಗಾಗಲೇ ಜಗತ್ತಿನ ಹಲವು ರಾಷ್ಟçಗಳು ಸಂಪೂರ್ಣ ಸಾವಯವ ಪದ್ಧತಿಯ ಆಹಾರ ವಸ್ತುಗಳ ತಯಾರಿಕೆಯಲ್ಲಿ ತೊಡಗಿವೆ. ಇಂಥ ಪದಾರ್ಥಗಳ ಸೇವನೆಯಿಂದ ನಮ್ಮ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ. ನಮ್ಮ ಮುಂದಿನ ಯುವ ಪೀಳಿಗೆಯನ್ನು ಆರೋಗ್ಯವಂತರನ್ನಾಗಿಸಲೂ ಇದು ಸಹಕಾರಿಯಾಗಲಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಭೂಮಿಗೆ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.

ನಾವು ಮಾಡುವ ವೃತ್ತಿ ಯಾವುದೇ ಇರಲಿ ಗುರಿ ಇಟ್ಟುಕೊಂಡು ಮುನ್ನುಗ್ಗಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಉತ್ತಮ ಉದಾಹರಣೆ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪಡೆದಿರುವ ಡಾ. ಕವಿತಾ ಮಿಶ್ರಾ ಅವರೇ ಉತ್ತಮ ಉದಾಹರಣೆಯಾಗಿದ್ದಾರೆ. ಮನಸ್ಸಿದ್ದರೆ ಮಾತ್ರ ಕ್ಷೇತ್ರ ಯಾವುದೇ ಇರಲಿ ಅಲ್ಲಿ ನಮಗೆ ಉತ್ತಮ ಮಾರ್ಗವೇ ಸಿಗುತ್ತದೆ ಎಂದು ಪ್ರತಿಪಾದಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಯಚೂರು ಜಿಲ್ಲೆಯ ಸಾವಯವ ಕೃಷಿ ಸಾಧಕಿ ಡಾ. ಕವಿತಾ ಮಿಶ್ರಾ ಮಾತನಾಡಿ, ಇಂದು ಗುರುಗಳಿಂದ ಸ್ವೀಕರಿಸಿದ ಈ ಪ್ರಶಸ್ತಿ ಕೇವಲ ನನಗೆ ಮಾತ್ರ ಸಿಕ್ಕಿದ್ದಲ್ಲ. ಬದಲಾಗಿ ಇದು ರಾಜ್ಯದ ಎಲ್ಲ ಕೃಷಿ ಮಹಿಳೆಯರಿಗೂ ಸಿಕ್ಕ ಗೌರವವಾಗಿದೆ. ನನ್ನ ಜಮೀನು ರಾಯಚೂರು ಜಿಲ್ಲೆಯ ಗುಡ್ಡ ಪ್ರದೇಶ. ಇಲ್ಲಿ ನೀರು ಸಿಗುವುದೇ ಅಪರೂಪ. ಕಳೆದ ವರ್ಷವಂತೂ ನನ್ನ ತೋಟದಲ್ಲಿ ಸಂಪೂರ್ಣ ನೀರೇ ಇಲ್ಲದಂತಾಯಿತು. ಇದರಿಂದ ನನಗೆ ಮುಂದೇನು ಮಾಡಬೇಕು ಎಂದು ತೋಚದ ಸ್ಥಿತಿ ನಿರ್ಮಾಣವಾಗಿತ್ತು. ಆಗ ನಾನು ರಂಭಾಪುರಿ ಶ್ರೀಗಳನ್ನು ಮನಸ್ಸಿನಲ್ಲಿಯೇ ನೆನೆಸಿಕೊಂಡೆ ಆಗ ನನಗೆ ಧೈರ್ಯ ಬಂತು. ಮನೆ ಮುಂದೆಯೇ ಕೊಳವೆ ಬಾವಿ ಕೊರೆಯಿಸಿದೆ ಒಂದೂವರೆ ಇಂಚು ನೀರು ಕೇವಲ ೬೦ ಅಡಿಗೆ ಸಿಕ್ಕಿತು ಎಂದು ಹಿಂದಿನ ಘಟನೆ ಮೆಲುಕು ಹಾಕಿದರು.

ತಂದೆ ಇಲ್ಲದವರಿಗೆ ಮಠವೇ ನಮಗೆ ತವರು ಮನೆಯಿದ್ದಂತೆ. ಶ್ರೀಗಳ ಆಶೀರ್ವಾದದಿಂದಾಗಿ ನಾನು ಕೇವಲ ಒಂದೂವರೆ ಇಂಚು ನೀರಿನಲ್ಲಿ ಏಳು ಸಾವಿರ ಗಿಡಗಳನ್ನು ಬೆಳೆಸುತ್ತಿz್ದೆÃನೆ. ಇದಲ್ಲದೆ ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ-ಕೋಳಿ ಸಾಕಾಣಿಕೆ ನಡೆಸುತ್ತಿz್ದÉÃನೆ. ಗುರುಗಳ ಶ್ರೀ ರಕ್ಷೆ ಇದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಉತ್ತಮ ಉದಾಹರಣೆ ಎಂದರು.

ರೈತರು ಒಂದೇ ಬೆಳೆಗೆ ಜೋತು ಬಿದ್ದಾಗ ನಷ್ಟ ಸರ್ವೇ ಸಮಾನ್ಯವಾಗುತ್ತದೆ. ಹೀಗಾಗಿ ಕೃಷಿಯಲ್ಲಿ ಬದಲಾವಣೆ ಕಂಡುಕೊಳ್ಳುವAತಾಗಬೇಕು. ನನ್ನ ತೋಟದಲ್ಲಿ ಎರಡು ಸಾವಿರ ಶ್ರೀಗಂಧದ ಸಸಿ ಬೆಳೆಸಿz್ದÉÃನೆ. ಇದಲ್ಲದೆ ಸೀಬೆ, ಹುಣಸೆ, ಮೂಸಂಬಿ ಹೀಗೆ ವಿವಿಧ ಬೆಳೆ ಬೆಳೆದಿz್ದÉÃನೆ. ಇದರಿಂದ ನನಗೆ ಕಾಲಕಾಲಕ್ಕೆ ಆದಾಯವೂ ಬರುತ್ತಿದೆ. ಜಗತ್ತಿಗೆ ಅನ್ನ ಹಾಕುವ ಶಕ್ತಿ ಇದ್ದರೆ ಅದು ರೈತರಿಗೆ ಮಾತ್ರ. ಕೃಷಿ ಮಹಿಳಾ ಪ್ರಧಾನ. ಪುರುಷರಿಗೆ ಬೆಳಗ್ಗೆ ರೊಟ್ಟಿ ಕೊಟ್ಟು ಅವರೊಂದಿಗೆ ಹೊಲಕ್ಕೆ ಹೋಗಿ ದುಡಿಯುತ್ತೇವೆ. ಹೀಗಾಗಿ ಕೃಷಿ ಮಹಿಳಾ ಪ್ರಧಾನವಾಗಿದೆ ಎಂದು ಪ್ರತಿಪಾದಿಸಿದರು.

ಯಾವ ಕೆಲಸ ಚಿಕ್ಕದೂ ಅಲ್ಲ, ದೊಡ್ಡದೂ ಅಲ್ಲ. ಬದಲಿಗೆ ಬೇರೆಯವರ ಎದುರು ಬೇಡುವುದು ಚಿಕ್ಕ ಕೆಲಸ. ಒಂದು ಎಕರೆ ಹೊಲ ಇದೆ ಎಂದರೆ ಅವರೇ ಶ್ರೀಮಂತರು. ಆದರೆ ರೈತರು ಮೆರೆಯುವುದಿಲ್ಲ. ಮಣ್ಣಿನಿಂದ ಬಂದಿರುವ ಈ ದೇಹ ಮಣ್ಣಿಗೆ ಸೇರುತ್ತದೆ ಎಂಬುದು ರೈತನಿಗೆ ಗೊತ್ತಿದೆ ಎಂದು ಹೇಳಿದರು.

ಕಾರ್ಯಕ್ರಮ ಸಾನ್ನಿಧ್ಯವನ್ನು ರಂಭಾಪುರಿ ಶ್ರೀಗಳು ವಹಿಸಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು. ರೋಣ ಶಾಸಕ ಜಿ.ಎಸ್.ಪಾಟೀಲ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್.ಜ್ಯೋತಿಪ್ರಕಾಶ್ ಭಾಗವಹಿಸಿದ್ದರು.

ಪಡಸಾವಳಿ-ಉದ್ಗಿರಿ ಕ್ಷೇತ್ರದ ಶಂಭುಲಿAಗ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಮುಕ್ತಿಮಂದಿರ ಕ್ಷೇತ್ರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net