ರೈತರ ಪಂಪ್ ಮೋಟಾರ್ ಕಳ್ಳರ ಬಂಧನ

310KML04
Published on


ಕಮಲಾಪುರ : ರೈತರ ಹೊಲಗದ್ದೆಗಳಿಗೆ ನೀರುಣಿಸಲು ತಂದಿದ್ದ ಪಂಪ್ಸೆಟ್ ಮೋಟಾರ್ ಕಳ್ಳರನ್ನು ಮಹಾಗಾಂವ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಸ್ತಾಪುರ ಗ್ರಾಮದಲ್ಲಿ ಮಾಚರ್್ ತಿಂಗಳಲ್ಲಿ ಒಂದೇ ದಿನ 18 ಮೋಟಾರ್ಗಳನ್ನು ಕಳ್ಳತನ ಮಾಡಲಾಗಿತ್ತು, ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಶಯದ ಆಧಾರದ ಮೇಲೆ ಶನಿವಾರ ಸಿಪಿಐ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐ ಹುಸೇನ್ ಬಾಷಾ, ಪ್ರೊ.ಎಸ್ಐ ಪುಷ್ಪಾ ನೇತೃತ್ವದಲ್ಲಿ ಕಲಬುರಗಿ ತಾಲೂಕಿನ ಬೇಲೂರ ಗ್ರಾಮದ ಬಳಿ ಖಲೀಲ್ ಅಹ್ಮದ್ ಮತ್ತು ಖಾಜಾ ನಬಿ, ಮಹಮದ್ ಹಾರೂನ ಸಾಬ್ನನ್ನು ಬಂಧಿಸಿ 3 ಲಕ್ಷ ರೂ. ವೆಚ್ಚದ 18 ಮೋಟಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ ಉಡುಗೆ, ಕೃಷ್ಣಾ ರೆಡ್ಡಿ, ಮಂಜುಳಾ, ಅಮರನಾಥ, ಬೀರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net