

ಕೋಲಾರ: ರೈತರ ಕಷ್ಟಗಳಿಗೆ ಸ್ಪಂದಿಸಬೇಕಿದ್ದು, ಕೃಷಿಗೆ ಅಗತ್ಯ ಸವಲತ್ತು ಮತ್ತು ವೈಜ್ಞಾನಿಕವಾಗಿ ಬೆಳೆ ಬೆಳೆಯವ ಬಗ್ಗೆ ಯೋಜನೆ ರೂಪಿಸಬೇಕಿದೆ ಎಂದು
ಕೋಲಾರ ರೋಟರಿ ಸೆಂಟ್ರಲ್ ಆರ್‌ಐ * ಜಿಲ್ಲೆ ೩೧೯೧ರ ನೂತನ ಅಧ್ಯಕ್ಷ ಕೆ.ಎನ್. ಪ್ರಕಾಶ್ ತಿಳಿಸಿದರು.
ನಗರದ ರೋಟರಿ ಸೆಂಟ್ರಲ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಿಯೋಜಿತ ಗವರ್ನರ್ ಬಿ.ಆರ್.ಶ್ರೀಧರ್‌ರಿಂದ ಅಧಿಕಾರ ವಹಿಸಿಕೊಂಡು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ದಾಖಲೆ ರೀತಿಯಲ್ಲಿ ಸಸಿಗಳನ್ನು ನಾಟಿ ಮಾಡಲಾಗುವುದು. ಕೊಂಡರಾಜನಹಳ್ಳಿ ಸರ್ಕಾರಿ ಶಾಲೆಗೆ ಪಿಠೋಪಕರಣ, ಔಷಧ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳನ್ನು ಓದಗಿಸುವುದು ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದರು.
ನಿರ್ಗಮಿತ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ರೋಟರಿ ಕ್ಲಬ್ ಸಮಾಜ ಸೇವೆಗೆ ಮಾದರಿಯಾಗಿದೆ. ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳ್ಗೆಗೆ ಶ್ರಮಿಸುತ್ತಿದೆ. ಸಮಾಜಮುಖಿ ಕಾರ್ಯಗಳಿಗೆ ನೂತನ ಪದಾಧಿಕಾರಿಗಳು ಶ್ರಮಿಸಬೇಕು. ಕರೋನಾ ಸಂದರ್ಭದಲ್ಲಿ ಎಲ್ಲರ ಸಹಕಾರದೊಂದಿಗೆ ಜನರ ನೆರವಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಂಡು ಸ್ಪಂದಿಸಿದ್ದೇವೆ. ಮುಂದೆಯೂ ಸಹ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಹೆಚ್ಚಿನ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ತೋಟಗಾರಿಕೆ ಬಿಎಸ್‌ಸ್ಸಿಯಲ್ಲಿ ೧೬ ಚಿನ್ನದ ಪದಕ ಪಡೆದ ಸುಗಟೂರಿನ ಪದವೀಧರೆ ಧರಣಿ ಹಾಗೂ ಆಂಗ್ಲ ಭಾಷೆಯಲ್ಲಿ ಉತ್ತಮ ಸಾಧನೆ ಮಾಡಿ ಚಿನ್ನದ ಪದಕ ಪಡೆದ ಸಾಯಿಪ್ರಜಯ್‌ರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿಯಾಗಿ ಎಚ್.ವಿಶ್ವನಾಥಗೌಡ ಮತ್ತು ಪದಾಧಿಕಾರಿಗಳು ಅಧಿಕಾರವಹಿಸಿಕೊಂಡರು.
ವಿಭಾಗೀಯ ಗವರ್ನರ್ ರಾಮಚಂದ್ರಪ್ಪ, ಕಾರ್ಯದರ್ಶಿ ಎಸ್.ಸುಧಾಕರ್, ಖಜಾಂಚಿ ವಿ.ಎಚ್.ರಾಜಕುಮಾರ್, ರೊಟೇರಿಯನ್‌ಗಳಾದ ರಮೇಶ್ ಬಾಬು, ರೂಪೇಶ್, ರಾಮಚಂದ್ರೆಗೌಡ, ಸಂಪಂಗಿ ರಾಮಯ್ಯ, ರಮೇಶ್, ಸುಧಾಕರ್, ರಾಮಕೃಷ್ಣಪ್ಪ, ಗೋವಿಂದರಾಜು, ಅಂಬರೀಶ್, ಅಪ್ಪಿ ನಾರಾಯಣಸ್ವಾಮಿ, ಶ್ರೀರಾಮ್, ಮುಖಂಡರಾದ ತಂಬಳ್ಳಿ ಮುನಿಯಪ್ಪ, ಅಪ್ಪಯ್ಯಗೌಡ, ಕೆಎಸ್‌ಆರ್‌ಟಿಸಿ ಮುನಿಯಪ್ಪ, ಕದಂಬ ಸೋಮಣ್ಣ, ನಾಗಾನಂದ ಕೆಂಪರಾಜ್, ಅಮು ಲಕ್ಷ್ಮೀನಾರಾಯಣ, ನಡುಪಳ್ಳಿ ಕೃಷ್ಣಮೂರ್ತಿ, ಹೂವಳ್ಳಿ ಚಂದ್ರು, ಮುನಿಸ್ವಾಮಿ, ಗಂಗಾಧರ್, ಸುಜಾತಾ ಪ್ರಕಾಶ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.