ರೈತರ ಕೆಲಸ ಕಾಳಜಿಯಿಂದ ಮಾಡಿಕೊಡಿ

ydg2
ಯಲಸತ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಶಾಸಕ ಶರಣಗೌಡ ಕಂದಕೂರ ತೆರಳಿ ಪರಿಹಾರದ ಚೆಕ್ ವಿತರಿಸಿದರು. ವೀರೇಂದ್ರ ರಡ್ಡಿ ಯಲಸತ್ತಿ, ಅಜಯರಡ್ಡಿ ಎಲ್ಹೇರಿ, ಸುಭಾಸ ಕಟಕಟಿ, ಸಂಜೀವರಡ್ಡಿ ಜೈಗ್ರಾಂ, ಯಂಕೋಬಾ ತುರಕನದೊಡ್ಡಿ ಇತರರಿದ್ದರು.
Published on

ಯಾದಗಿರಿ: ಅಧಿಕಾರಿಗಳು ರೈತರ ಕೆಲಸವನ್ನು ಅತ್ಯಂತ ಕಾಳಜಿಯಿಂದ ಮಾಡಿಕೊಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸೂಚಿಸಿದರು.
ಗುರುಮಠಕಲï ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಕ್ಷೇತ್ರದ ಬಂದಳ್ಳಿ, ಚಾಮನಳ್ಳಿ, ಚಾಮನಳ್ಳಿ ತಾಂಡಾ, ಕಂಚಗಾರಹಳ್ಳಿ ರೈತರಿಗೆ ಪಂಪ್‌ಸೆಟ್ ವಿತರಿಸಿ ಮಾತನಾಡಿದ ಅವರು, ಅನ್ನದಾತನಿಂದ ದೇಶ ಸಮೃದ್ಧಿಯಾಗಿದೆ. ಇಂತಹ ರೈತರಿಗೆ ಸಾಧ್ಯವಾದಷ್ಟು ನಾವು ಸಹಕಾರ ನೀಡಿ ಅವರ ಅಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.

ರೈತರ ಶ್ರಮದಿಂದ ದೇಶ ಇಂದು ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗಿದೆ. ಕೃಷಿ ಪ್ರಧಾನವಾದ ದೇಶ ನಮ್ಮದಾಗಿರುವುದರಿಂದ ನಾವು ರೈತರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು. ರೈತರನ್ನು ಸತಾಯಿಸಬೇಡಿ, ಈ ಇಲಾಖೆಯಿಂದ ಸರ್ಕಾರದ ಗೌರವ ಇದೆ. ಅದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸುಖಾಸುಮ್ಮನೇ ಯಾವುದೇ ಸಣ್ಣ ರೈತರಿಗೆ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನಮ್ಮ ಕ್ಷೇತ್ರದಲ್ಲಿಯೇ ಅತ್ಯಂತ ಹೆಚ್ಚಿನ ಜನರು ಪ್ರಕೃತಿ ವಿಕೋಪಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಇತ್ತೀಚೆಗೆ ಜಿನಕೇರಾ ಗ್ರಾಮದಲ್ಲಿ ಸಿಡಿಲಿಗೆ ನಾಲ್ವರು ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೆ ಯಲಸತ್ತಿ ಗ್ರಾಮದಲ್ಲಿ ಕೂಡ ಈ ಘಟನೆ ನಡೆದಿರುವುದು ತುಂಬಾ ಕಳವಳಕಾರಿಯಾಗಿದೆ ಎಂದರು.

ಆದುದರಿAದ ಸಾರ್ವಜನಿಕರು ಆದಷ್ಟು ಮಳೆ, ಗಾಳಿ, ಗುಡುಗು ಮಿಂಚಿನ ವೇಳೆ ಎಚ್ಚೆತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುವುದೊಂದೆ ಪರಿಹಾರ ಮಾರ್ಗ. ಹೀಗಾಗಿ ಜನರು ನಿರ್ಲಕ್ಷÈವಹಿಸದೇ ಆದಷ್ಟು ಜಾಗೃತಿ ವಹಿಸಬೇಕು ಎಂದರು.

ರಾಮಣ್ಣಗೌಡ ಮಲ್ಹಾರ, ಬಸವರಾಜಗೌಡ ಚಾಮನಳ್ಳಿ, ಅಜಯರಡ್ಡಿ ಎಲ್ಹೇರಿ, ಸುಭಾಸ ಕಟಕಟಿ, ಕೃಷಿ ಇಲಾಖೆ ಅಧಿಕಾರಿಗಳಾದ ಸುರೇಶ, ಯಾಮರಡ್ಡಿ, ಶರಣಗೌಡ ಚಾಮನಳ್ಳಿ, ಅಂಬ್ರೇಶಗೌಡ ಬಂದಳ್ಳಿ, ಜಿ. ತಮ್ಮಣ್ಣ ಗುರುಮಠಕಲï, ಯಂಕೋಬ ಕಂಚಗಾರಹಳ್ಳಿ, ಭೀಮರಾತಯ ಕಂಚಗಾರಹಳ್ಳಿ, ಬಂದಪ್ಪಗೌಡ ಲಿಂಗೇರಿ, ಮಹಿಪಾಲರೆಡ್ಡಿ ಸಾವೂರ, ಸಂತೋಷ ಚಾಮನಳ್ಳಿ ತಾಂಡಾ, ನಾಗರಾಜ ಬಂದಳ್ಳಿ, ಚಂದ್ರಶೇಖರ ಕಂಚಗಾರಹಳ್ಳಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net