ರೈತರ, ಕೃಷಿ ಕಾರ್ಮಿಕ ವಿಧಾನಸೌಧ ಚಲೋ 10ಕ್ಕೆ

oppo_2
oppo_2
Published on

ಕಲಬುರಗಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಖಾತೆ ಹೊಂದಿರುವವರಿಗೆ ಪೋಡಿ ದುರಸ್ತ ಮಾಡಿಕೊಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿAದ ಮಾ.೧೦ರಂದು ರೈತರ, ಕೃಷಿ ಕಾರ್ಮಿಕರ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಬಿ.ಭಗವಾನ ರೆಡ್ಡಿ ತಿಳಿಸಿದರು.

ನರೇಗಾ ಅಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ೨೦೦ ಮಾನವ ದಿನ ಕೆಲಸ ನೀಡಬೇಕು, ಕನಿಷ್ಠ ೬೦೦ ರೂ. ವೇತನ ನೀಡಬೇಕು, ಹೊಸ ಕೃಷಿ ನೀತಿಯನ್ನು ಕೈ ಬಿಡಬೇಕು, ಬೆಂಬಲ ಬೆಲೆಯನ್ನು ಕಾನೂನು ಬದ್ಧ ಮಾಡಬೇಕು, ಬೀಜ, ರಸಗೊಬ್ಬರ, ಕೀಟನಾಶಗಳನ್ನು ಕಡಿಮೆ ದರದಲ್ಲಿ ಸರಬರಾಜು ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ವಿದ್ಯುತ್ ಕಾಯ್ದೆ ೨೦೨೩ರನ್ನು ಕೂಡಲೇ ರದ್ದುಗೊಳಿಸಿ, ವಿದ್ಯುತ್ ಖಾಸಗೀಕರಣ ಹಿಂತೆಗೆದುಕೊಳ್ಳಬೇಕು, ರೈತರ ಸಾಲ ಮನ್ನಾ ಮಾಡಬೇಕು, ೬೦ ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡಬೇಕು, ಗ್ರಾಮೀಣ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಕಲ್ಪಿಸಬೇಕು, ಬೆಳೆ ಮಾರಾಟದ ನಂತರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಗಣಪತರಾವ ಮಾನೆ, ಮಹೇಶ ಎಸ್.ಬಿ., ನೀಲಕಂಠ ಹುಲಿ, ಭೀಮಾಶಂಕರ ಆಂದೋಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net