ರೈತರ ಕಷ್ಟ ಪರಿಹರಿಸಿದರೆ ದೇಶದ ಉಳಿವು, ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ನಾಗರಾಜು ಅಭಿಮತ, ಅನ್ನದಾತರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

23 Nela Ph 01 Farmers day
Published on

ನೆಲಮಂಗಲ: ರೈತ ಸಮುದಾಯವನ್ನು ಕಷ್ಟದಿಂದ ಪಾರು ಮಾಡಿದಾಗ ದೇಶ ಉಳಿಯುತ್ತದೆ ಎಂದು ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ನಾಗರಾಜು ಅಭಿಪ್ರಾಯಪಟ್ಟರು.

ತಾಲೂಕು ಕಚೇರಿ ಒಳಿಯ ರೈತರ ಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ರೈತರ ದಿನಾಚರಣೆಯಲ್ಲಿ ಮಾತನಾಡಿದರು. ಕೃಷಿ ಪ್ರಧಾನ ದೇಶದಲ್ಲಿ ರೈತರಿಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡಬೇಕು. ರೈತ ದಿನಾಚರಣೆ ಮೂಲಕ ಅನ್ನದಾತರಿಗೆ ಗೌರವ ಸಲ್ಲಿಸುವ ಜತೆಗೆ ರೈತರ ಸಂಕಷ್ಟ ದೂರ ಮಾಡುವ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದರು.

ಕೃಷಿ ಇಲಾಖೆಯಲ್ಲಿ ಲಭ್ಯ ಇರುವ ಯೋಜನೆಗಳು, ಸೌಲಭ್ಯದ ಕುರಿತಾಗಿ ಮಾಹಿತಿ ನೀಡುವ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ರೈತರು, ಶ್ರೀಗಂಧ, ರಕ್ತಚಂದನ ಬೆಳೆಯಲು ಮುಂದಾಗಬೇಕು. ಇದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಸಾಧ್ಯ ಎಂದರು.

ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ರೈತರ ಕಲ್ಯಾಣಕ್ಕಾಗಿ ಮಾಜಿ ಪ್ರಧಾನ ಮಂತ್ರಿ ಚೌಧರಿಚರಣ್ ಸಿಂಗ್ ಶ್ರಮಿಸಿದ್ದು, ಅವರ ಜನ್ಮದಿನವನ್ನು ರೈತರ ದಿನವಾಗಿ ಆಚರಿಸಲಾಗುತ್ತಿದೆ. ಅನ್ನದಾತರ ಸಾಮಾಜಿಕ ಹಾಗೂ ಅರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಅಧುನಿಕ ಕೃಷಿಪದ್ಧತಿಗೆ ಅತಿಹೆಚ್ಚು ಪ್ರೋತ್ಸಾಹ ನೀಡಿದ್ದಾರೆ ಎಂದರು.

ಪರಿಸರ ಸಂರಕ್ಷಣೆಯಲ್ಲಿ ರೈತರ ಪಾತ್ರ ಮಹತ್ವವಾದದ್ದು. ದೇಶಕ್ಕೆ ಅನ್ನ ನೀಡುವ ರೈತರನ್ನು ಅಧುನಿಕ ಜಗತ್ತಿನಲ್ಲಿ ಕಡೆಗಣಿಸುತ್ತಿರುವುದು ಬೇಸರದ ಸಂಗತಿ. ಮಾರುಕಟ್ಟೆ ವ್ಯವಸ್ಥೆಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾಗಿ, ಸಾಕಷ್ಟು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮುಂದಿನ ದಿನಗಳಲ್ಲಿ ರೈತರ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮವಹಿಸಬೇಕು ಎಂದರು.

ರೈತರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಟಿ.ಲಕ್ಷ್ಮೀವೆಂಕಟೇಶ್, ಸಂಚಾಲಕ ಟಿ.ತಿಮ್ಮೇಗೌಡ, ನಿರ್ದೇಶಕರಾದ ಎಚ್.ತಿಮ್ಮೇಗೌಡ, ಚನ್ನಯ್ಯ, ತಿಮ್ಮಗೌಡ, ಜನಾದರ್ನ್, ಕಿಸಾನ್‌ಪ್ರದೀಪ್, ಕಾಂತರಾಜು, ರಮೇಶ್, ತಿಮ್ಮರಾಜು, ಆಶ್ವಥಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net