

ಕಾಳಗಿ: ರೈತರ ಏಳ್ಗೆಗಾಗಿ ದಿನದ 24 ಗಂಟೆ ಚಿಂತಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ನನ್ನ ರಾಜಕೀಯ ಬದುಕಿನುದ್ದಕ್ಕು ರೈತರ ಉಸಿರಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.
ಪಟ್ಟಣದಲ್ಲಿ ರೈತ ಸೇವಾ ಸಹಕಾರ ಸಂಘದಿಂದ ನಿರ್ಮಿಸಲಾಗಿರುವ 23 ವಾಣಿಜ್ಯ ಮಳಿಗೆಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಳಗಿ ರೈತ ಸೇವಾ ಸಹಕಾರ ಸಂಘ ಜಿಲ್ಲೆಯಲ್ಲಿಯೇ ಮಾದರಿ ಸಂಘವಾಗಿದೆ. ಇಲ್ಲಿಯ ಅಚ್ಚುಕಟ್ಟಾದ ಆಡಳಿತದಿಂದ ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ಸಾಗುತ್ತಿವೆ. ಸಂಘದ ಅಭಿವೃದ್ಧಿಗಾಗಿ ಸದಾ ಕಾಲ ನೆರವು ನೀಡಲು ಸಿದ್ಧ ಎಂದು ತಿಳಿಸಿದರು.
ಕಾಳಗಿ ಹಿರೇಮಠದ ಪಿಠಾಧೀಪತಿ ಶ್ರೀ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಡಿಮೆ ಸಮಯದಲ್ಲಿ 23 ವಾಣಿಜ್ಯ ಮಳಿಗೆ ನಿಮರ್ಿಸಿ, ಸಂಘದ ಅಭಿವೃದ್ಧಿಗೆ ಶ್ರಮಿಸಿದ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಜಾಧವ್, ಉಪಾಧ್ಯಕ್ಷ ದೇವಿಂದ್ರ ಕದಂ ಅವರನ್ನು ಸನ್ಮಾನಿಸಲಾಯಿತು.
ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಜಾಧವ್, ಉಪಾಧ್ಯಕ್ಷ ದೇವಿಂದ್ರ ಕದಂ, ಪ್ರಮುಖರಾದ ಸಂತೋಷ ಗಡಂತಿ, ಚಂದ್ರಕಾಂತ ಜಾಧವ್, ಮಲ್ಲಿನಾಥ ಪಾಟೀಲ್, ಪರಮೇಶ್ವರ ಮಡಿವಾಳ, ರಾಮಶೆಟ್ಟಿ ಪಾಟೀಲ್, ರಾಜಕುಮಾರ ರಾಜಾಪುರ, ರಮೇಶ ಕಿಟ್ಟದ, ಪ್ರಶಾಂತ ಕದಂ, ಜಗದೀಶ ಪಾಟೀಲ್, ಸಿದ್ದಣ್ಣ ಭೂತಾಳಿ, ಸಂತೋಷ ಪಾಟೀಲ್ ಮಂಗಲಗಿ, ಶಿವಶರಣಪ್ಪ ಬಡಿಗೇರ, ಶೇಖರ ಪಾಟೀಲ್, ಸಂತೋಷ ಚವ್ಹಾಣ್ ಮಂಗಲಗಿ, ಭೋಗಪ್ಪ ರಾಜಾಪುರ, ಜೈರಾಮ ಜಾಧವ್, ನಾಗರಾಜ ಹಾವಗುಂಡಿ, ಹಣಮಂತ ಸೇಗಾಂವಕರ, ಠಾಕ್ರು ಜಾಧವ್, ಲಕ್ಷ್ಮಣ ಜಾಧವ್, ಹಣಮಂತ ಒಡೆಯರಾಜ, ಇಸು ಪಾಟೀಲ್, ಕೇಸು ಜಾಧವ್, ಭೀಮು ರಾಠೋಡ್, ಮಲ್ಲಿಕಾಜರ್ುನ ಪೂಜಾರಿ, ಅಣ್ಣಾರಾವ ಪೆದ್ದಿ, ವಿಜಯಕುಮಾರ ರಾಠೋಡ್, ದೇವಜಿ ಜಾಧವ್, ಶರಣು ಚಂದಾ, ಅಶೋಕ ಮೋಘಾ ಇತರರಿದ್ದರು.
ಸೂರ್ಯಕಾಂತ ಕಟ್ಟಿಮನಿ ನಿರೂಪಣೆ ಮಾಡಿ, ವಂದಿಸಿದರು.