ರೈತರ ಉತ್ಪನ್ನ ಸ್ಥಳದಲ್ಲೇ ಖರೀದಿಸಿ

RC Meet
Published on

ಕಲಬುರಗಿ: ಕರೊನಾ ಹಿನ್ನೆಲೆಯಲ್ಲಿ ಲಾಕಡೌನ್ ಹೇರಿರುವುದರಿಂದ ಜಿಲ್ಲೆಯಲ್ಲಿ ರೈತರ ದವಸ -ಧಾನ್ಯ, ತರಕಾರಿ ಹಾಗೂ ಹಣ್ಣುಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ವಾಹನ ಬಳಸಿಕೊಂಡು ರೈತರು ಬೆಳೆ ಸ್ಥಳದಲ್ಲಿಯೇ ಖರೀದಿಸಿ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು..
ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಸಭಾಂಗಣದಲ್ಲಿ ಕರೊನಾ ವೈರಸ್ ಪರಿಸ್ಥಿತಿ ಅವಲೋಕನಕ್ಕೆ ಕರೆದಿದ್ದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಈ ಮೊದಲು ಇಲ್ಲಿನ ರೈತರು ಬೆಳೆದಿರುವ ಧವಸ-ಧಾನ್ಯಗಳು, ತರಕಾರಿ ಹಾಗೂ ಹಣ್ಣುಗಳು ಶೇ. 32 ರಿಂದ 35 ಜಿಲ್ಲೆಯಲ್ಲೇ ಮಾರಾಟವಾಗುತ್ತಿದ್ದು, ಉಳಿದ ಕೃಷಿ ಉತ್ಪನ್ನಗಳು ಬೇರೆಡೆ ರಫ್ತು ಮಾಡಲಾಗುತ್ತಿತ್ತು ಎಂದು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಶರತ್.ಬಿ ಅವರು ಸಭೆಯಲ್ಲಿ ಮಾತನಾಡಿ ಜಿಲ್ಲೆಯಿಂದ ಉಪಜೀವನಕ್ಕಾಗಿ ಹೋಗಿದ್ದ ಮಹಾರಾಷ್ಟ್ರ, ಹೈದರಾಬಾದ್ ಹಾಗೂ ಬೆಂಗಳೂರಿನಿಂದ ಈವರೆಗೆ 49000 ಸಾವಿರ ಜನ ಆಗಮಿಸಿದ್ದು ಅವರೆಲ್ಲರ ಮೇಲೆ ನಿಗಾ ವಹಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಓ ಡಾ. ಪಿ. ರಾಜಾ, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಸಹಾಯಕ ಆಯುಕ್ತ ಇಲಿಯಾಜ್ ಅಹಮದ್, ಡಿಸಿಪಿ ಕಿಶೋರ್ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಿತೇಂದ್ರನಾಥ್ ಸೂಗೂರು, ತೋಟಗಾರಿಕೆ ಉಪನಿರ್ದೆಶಕ ಸಂತೋಷ್ ಸಪ್ಪಂಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಬ್ಬಾರ್, ಆಹಾರ ಇಲಾಖೆ ಉಪನಿರ್ದೇಶಕ ಜಿ.ಎಂ. ಪಾಣಿ ಇತರರು ಇದ್ದರು.


ಕಲಬುರಗಿ ಜಿಲ್ಲೆಗೆ ಅಗತ್ಯವಿರುವಷ್ಟು ಹೊರತುಪಡಿಸಿ ಉಳಿದೆಲ್ಲಾ ಧವಸ-ಧಾನ್ಯಗಳು, ತರಕಾರಿ ಹಾಗೂ ಹಣ್ಣುಗಳನ್ನು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ರಫ್ತು ಮಾಡಬೇಕು.
ಎನ್.ವಿ.ಪ್ರಸಾದ,
ಪ್ರಾದೇಶಿಕ ಆಯುಕ್ತರು, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net