ರೈತರ ಅನುಕೂಲಕ್ಕೆ ರಸ್ತೆ ಅಭಿವೃದ್ಧಿ

12-11
ಆಜೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು. ಧರೆಪ್ಪ ಹೊನ್ನವಗೋಳ, ಮಹಾನಂದ ದೊಡ್ಡನವರ, ಬಾಳು ಹಜಾರೆ, ಶಂಕರ ದೊಡ್ಡನವರ ಇತರರಿದ್ದರು.
Published on

ಸಂಬರಗಿ: ರೈತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಸಮೀಪದ ಆಜೂರ ಗ್ರಾಮದಲ್ಲಿ 50 ಲಕ್ಷ ರೂ. ಅನುದಾನದ ರಸ್ತೆ ಕಾಮಗಾರಿಗೆ ಹಾಗೂ 1.81 ಲಕ್ಷ ರೂ. ಅನುದಾನದ ಜೆಜೆಎಂ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಎರಡು ಬಾರಿ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದರು.

ನಾನು ಸಚಿವನಾಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ನೀಡಿದ್ದೆ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಲ್ಲಿಯವರೆಗೆ ನಡೆದಿರುವ ಕಾಮಗಾರಿಗಳು ಕಳಪೆ ಕಂಡು ಬಂದಲ್ಲಿ ಗುತ್ತಿಗೆದಾರನಿಂದ ಮತ್ತೊಮ್ಮೆ ಕಾಮಗಾರಿ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು. ಗುತ್ತಿಗೆದಾರ ಶಂಕರ ದೊಡ್ಡನ್ನವರ ಮಾತನಾಡಿದರು. ಖೀಳೆಗಾಂವ ಗ್ರಾಪಂ ಅಧ್ಯಕ್ಷ ಧರೆಪ್ಪ ಹೊನ್ನವಗೋಳ, ಉಪಾಧ್ಯಕ್ಷ ಮಹಾನಂದ ದೊಡ್ಡನ್ನವರ, ಸವಿತಾ ಬನಸೋಡೆ, ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಜಿಪಂ ಅಭಿಯಂತ ಈರಣ್ಣ ವಾಲಿ, ಕಿರಿಯ ಅಭಿಯಂತ ಅಮರ ಮೇತ್ರಿ, ಶಂಕರ ಸಾಯಗಾಂವ, ರಾಮಣ್ಣ ಸೊಡ್ಡಿ, ಅಬ್ದುಲ್ ಮುಲ್ಲಾ, ಗುತ್ತಿಗೆದಾರ ರಾಜು ಅಲಬಾಳ, ಆರ್.ಎಚ್.ಬಾರಗಿರ, ಮಲ್ಲಿಕಾರ್ಜುನ ದೊಡ್ಡನವರ, ಬಸಗೌಡ ಪಾಟೀಲ ಇತರರಿದ್ದರು.

ಸಮರ್ಪಕ ವಿದ್ಯುತ್ ಪೂರೈಸಿ: ಸಂಬರಗಿ/ಮುರಗುಂಡಿ: ಗಡಿ ಭಾಗದ ಹಾಗೂ ಕೃಷ್ಣ ತೀರದ ವಿವಿಧ ಗ್ರಾಮಗಳ ರೈತರ ಅನುಕೂಲಕ್ಕಾಗಿ 24*7 ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ತಿಳಿಸಿದರು. ಸಮೀಪದ ಮುರಗುಂಡಿ ಗ್ರಾಮದಲ್ಲಿ 25 ಲಕ್ಷ ರೂ. ಅನುದಾನದ 5 ಎಂವಿಎ ಟಿಸಿ ಅಳವಡಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರಿಗಳು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಸೂಚನೆ ನೀಡಿದರು. ರೈತರಾದ ಮಾಹಾದೇವ ಕೋರೆ, ಬಾನುದಾಸ ಖೋತ, ಸುನೀಲ ಮೋರೆ ಮಾತನಾಡಿದರು. ಆರ್.ಎಂ.ಪಾಟೀಲ, ಮಧಬಾವಿ ಪಿಕೆಪಿಎಸ್ ಅಧ್ಯಕ್ಷ ಮುರಗ್ಯಪ್ಪ ಮಗದುಮ್ಮ, ಈಶ್ವರ ಕುಂಬಾರ, ಅನಿಲ ಪಾಟೀಲ, ಸುನೀಲ ಪಾಟೀಲ, ಸಿದ್ರಾಯ ಕಾಳೇಲಿ, ಸುನೀಲ ಪವಾರ, ಕುಮಾರ ಪಾಟೀಲ, ಕೃಷ್ಣ ಪೂಜಾರಿ, ಬಸು ಪಾಟೀಲ, ಮಾಹಾವೀರ ಅವಟಿ, ಎಸ್.ಎಸ್.ಮಕಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net