ರೈತರ 40 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಜಿಲ್ಲಾಡಳಿತಕ್ಕೆ ಮನವಿ

ರೈತರ 40 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಜಿಲ್ಲಾಡಳಿತಕ್ಕೆ ಮನವಿ
Published on

ಹಾಸನ: ಸರಕಾರವು ಕೂಡಲೇ ಕೃಷಿ ಭೂಮಿ ಹಾಗೂ ಅತಿಸಣ್ಣ ಬಡ ರೈತರನ್ನು ರಕ್ಷಣೆ ಮಾಡಬೇಕು ಹಾಗೂ ರೈತರ 40 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಶ್ವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪಾದಯಾತ್ರೆ ಮೂಲಕ ಹಾಸನ ನಗರಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೇಲೂರು ತಾಲೂಕು ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಸರ್ವೆ ನಂ.1 ರಲ್ಲಿರುವ 2580 ಎಕರೆ ಸರ್ಕಾರಿ ಕೃಷಿ ಬಗರ್ ಹುಕುಂ ಭೂಮಿಯನ್ನು ರೈತರಿಗೆ ಮಂಜೂರಾತಿ ಮಾಡಬೇಕು. ಆದೇಶ ಪತ್ರ ಹಾಗೂ ಸರ್ವೆ ಹಾಗೂ ಎಲ್ಲಾ ದಾಖಲೆಗಳನ್ನು ನೀಡುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಭೂಮಿಗೆ ಅವಶ್ಯಕತೆ ಇರುವ ರಸಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ನೀಡುವಂತೆ ಅದೇಶ ಮಾಡಬೇಕಾಗಿ ಮನವಿ ಮಾಡಿದ ಪ್ರತಿಭಟನಾಕಾರರು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ನೀಡಬೇಕೆಂದರು.
ಅರಸೀಕೆರೆ ತಾಲ್ಲೂಕು ಕನಕಂಚೇನಹಳ್ಳಿ ಶ್ರೀ ರಂಗನಾಥ ಸ್ವಾಮಿ ಪ್ರಸನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅರಸೀಕೆರೆ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆ ಚಲೋ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ. ದೇಶಕ್ಕೆ ಸಾಕಷ್ಟು ಅನ್ನದ ಮಾರ್ಗ ಮಾಡಿರುವುದು ಭೂಮಿ ಪುತ್ರ ಎಂದು ಹೆಸರಾದ ಪ್ರಪಂಚದ ಮೊದಲ ದೇವರು ರೈತ, ರೈತನಿಗೆ ಯಾವುದೇ ಸಂಕಟ ಬರಬಾರದು. ರೈತರ ಕೃಷಿ ಭೂಮಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮಳೆ ಇಲ್ಲದೆ ರೈತರ ಬೆಳೆಗಳು ಈಗಾಗಲೆ ಸಂಪೂರ್ಣವಾಗಿ ನಾಶವಾಗಿದ್ದು, ಕೂಡಲೇ ಪರಿಹಾರ ಕಲ್ಪಿಸಬೇಕು ಮತ್ತು ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು. ಇದೇ ರೀತಿ ಒಟ್ಟು 40 ಬೇಡಿಕೆ ಮುಂದಿಟ್ಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಂಜಮ್ಮ, ಅಭಿಷೇಕ್, ಹೆಚ್.ಆರ್.ಬೋಜರಾಜ್ ತೇಜಸ್, ಅಬ್ದುಲ್, ಏಜಾಜ್ ಪಾಷ, ಶಶಿಕುಮಾರ್, ಹನುಮಂತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net