ರೈತನ ಮೇಲೆ ಕರಡಿ ದಾಳಿ

1-BKL-1 KARADI DAALI
Published on

ಭಟ್ಕಳ: ಜಮೀನು ಕೆಲಸ ಮುಗಿಸಿ ವಾಪಸ್ ಬರುತ್ತಿರುವ ವೇಳೆ ರೈತನ ಮೇಲೆ ಕರಡಿಗಳು ದಾಳಿ ನಡೆಸಿದ ಘಟನೆ ತಾಲೂಕಿನ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ರಾಮಚಂದ್ರ ನಾರಾಯಣ ನಾಯ್ಕ ಕರಡಿ ದಾಳಿಗೊಳಗಾದ ರೈತ.

ಈತ ತನ್ನ ಜಮೀನಿನಲ್ಲಿ ಕೆಲಸ ಮುಗಿಸಿ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿನ ಕಾಲು ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಎರಡು ಕರಡಿಗಳು ದಾಳಿ ನಡೆಸಿವೆ. ಹರಸಾಹಸಪಟ್ಟು ಕರಡಿಯಿಂದ ತಪ್ಪಿಸಿಕೊಂಡು ಬಂದ ಈತನನ್ನು ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ತಲೆ, ಕೈ, ಕಾಲು ಹಾಗೂ ತೊಡೆ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net