ರೈತನ ಜೇಬು ಖಾಲಿ ಕೃಷಿ ಚಟುವಟಿಕೆಗೆ ಹಿನ್ನಡೆ

Farmer
Published on

ಜಯತೀರ್ಥ ಪಾಟೀಲ ಕಲಬುರಗಿ
ಕೋವಿಡ್ ಹೊಡೆತದಿಂದ ತತ್ತರಿಸುತ್ತಿರುವ ಅನ್ನದಾತನ ಜೇಬೂ ಖಾಲಿಯಾಗಿದೆ. ತಾನು ಮಾರಿದ ತೊಗರಿಯ ಬಾಕಿ ಹಣ ಬರದೇ ಒದ್ದಾಡುವಂತಾಗಿದೆ. ಇನ್ನೇನು ಮತ್ತೇ ಮುಂಗಾರು ಹಂಗಾಮು ಶುರುವಾಗುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಆತನ ಕೈಯ್ಯಲ್ಲಿ ಕಾಸೇ ಇಲ್ಲದಂತಾಗಿದೆ.
ರೈತನ ಪರ ಮೊಸಳೆ ಕಣ್ಣೀರು ಸುರಿಸುವ ಸಕರ್ಾರವಾಗಲಿ, ಪ್ರತಿಪಕ್ಷಗಳಾಗಲಿ ಆತನಿಗೆ ದೊರಕಬೇಕಾದ ಬಾಕಿ ಹಣ ಕೊಡಿಸುವಲ್ಲಿ ವಿಫಲವಾಗಿವೆ. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರದ ಮೂಲಕ ತನ್ನ ತೊಗರಿ ಮಾರಾಟ ಮಾಡಿರುವ ಸಾವಿರಾರು ರೈತರು ಹಣಕ್ಕಾಗಿ ಬಕಪಕ್ಷಿಯಂತೆ ಕಾದುಕುಳಿತುಕೊಳ್ಳುವಂತಾಗಿದೆ.
ರಾಜ್ಯದಲ್ಲಿ 3.17 ಲಕ್ಷ ರೈತರು ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ 2.72 ಲಕ್ಷ ರೈತರ ತೊಗರಿ ಖರೀದಿಯಾಗಿದೆ.
ಕಳೆದ ವರ್ಷ ಬರ ಬಿದ್ದ ಪರಿಣಾಮ 12 ಲಕ್ಷ ಕ್ವಿಂಟಾಲ್ ಮಾರಾಟವಾಗಿದ್ದ ತೊಗರಿ 2018ನೇ ಸಾಲಿನಲ್ಲಿ 35 ಲಕ್ಷ ಕ್ವಿಂಟಾಲ್ ಖರೀದಿಯಾಗಿತ್ತು. ಪ್ರಸಕ್ತ ವರ್ಷ ರಾಜ್ಯದಲ್ಲಿ 24 ಲಕ್ಷ ಕ್ವಿಂಟಾಲ್ ಮಾತ್ರ ತೊಗರಿ ಖರೀದಿ ಮಾಡಲಾಗಿದೆ.
ಕನರ್ಾಟಕ ತೊಗರಿ ಅಭಿವೃದ್ಧಿ ಮಂಡಳಿ ಮತ್ತು ಮಾಕರ್ೆಟಿಂಗ್ ಫೆಡರೇಶನ್ ಮೂಲಕ ತೊಗರಿ ಖರೀದಿ ಪ್ರಕ್ರಿಯೆ ನಡೆದಿದೆ. ತೊಗರಿ ಮಂಡಳಿಯೊಂದರ ಲೆಕ್ಕಾಚಾರ ಪರಿಗಣಿಸಿದಲ್ಲಿ ಸುಮಾರು 10 ಸಾವಿರ ರೈತರಿಗೆ 400 ಕೋಟಿ ರೂ. ಬಾಕಿ ಕೊಡಬೇಕಾಗಿದೆ. ಶೇ.60ಕ್ಕೂ ಹೆಚ್ಚು ರೈತರ ತೊಗರಿ ಖರೀದಿ ಮಾಡಿದ ಮೊತ್ತ ಈಗಾಗಲೇ ಅವರವರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಕರ್ಾರದ ಮೂಲಗಳು ಹೇಳುತ್ತವೆ. ಆದರೆ ವಾಸ್ತವ ಪ್ರಕಾರ ದುಡ್ಡೇ ಬಂದಿಲ್ಲವೆನ್ನುವುದು ರೈತರ ಅಳಲಾಗಿದೆ.
ಹೆಚ್ಚುವರಿ ಖರೀದಿ
ಮೊದಲು ಪ್ರತಿ ರೈತನಿಂದ 10 ಕ್ವಿಂಟಾಲ್ ತೊಗರಿ ಖರೀದಿಸಲು ಸಕರ್ಾರ ಮುಂದಾಗಿತ್ತು. ಬಹುತೇಕ ರೈತರು 10 ಕ್ವಿಂಟಾಲ್ ತೊಗರಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದರು. ಆ ನಂತರ ಪ್ರತಿ ರೈತನಿಂದ 20 ಕ್ವಿಂಟಾಲ್ ತೊಗರಿ ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಹೀಗಾಗಿ ಅನೇಕ ರೈತರು ಹೆಚ್ಚುವರಿಯಾಗಿ ಇನ್ನೂ 10 ಕ್ವಿಂಟಾಲ್ ತೊಗರಿ ಖರೀದಿ ಕೇಂದ್ರಕ್ಕೆ ರವಾನಿಸಿದರು. ಹೀಗಾಗಿ ಪಾವತಿಸಬೇಕಾದ ಬಾಕಿ ಮೊತ್ತ ದ್ವಿಗುಣಗೊಂಡಿತು.
ರೈತರ ಗೋಳು
ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿರುವ ಸಾವಿರಾರು ರೈತರು ಹಣ ಬಾರದಿರುವುದಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಜೂನ್ನಲ್ಲಿ ಮಳೆ ಬಂದು ಕೃಷಿ ಚಟುವಟಿಕೆ ಪ್ರಾರಂಭವಾಗಲಿದೆ. ಬಿತ್ತನೆ ಪ್ರಕ್ರಿಯೆ ಶುರುವಾಗಲಿದ್ದು, ಬೀಜ, ಗೊಬ್ಬರ, ಹೊಲ ಹದಮಾಡಿಕೊಳ್ಳುವುದು ಸೇರಿ ಅನೇಕ ಚಟುವಟಿಕೆಗೆ ಹಣ ಬೇಕು. ಸಕರ್ಾರ ಖರೀದಿಸಿದ ತೊಗರಿ ಹಣ ಕೊಡದಿದ್ದರೆ ನಮ್ಮ
ಗತಿಯೇನು ಎಂದು ಗೋಳಿಡುತ್ತಿದ್ದಾರೆ.
ತೊಗರಿ ಖರೀದಿ ವಿವರ
ಜಿಲ್ಲೆ ಖರೀದಿ ಕೇಂದ್ರ ನೋಂದಣಿ ಕ್ವಿಂಟಾಲ್ಸ್ ಫಲಾನುಭವಿ ರೈತರು
ಕಲಬುರಗಿ 160 1,21,111 9,37,967 1,00,030
ಬೀದರ್ 106 50,177 3,00,212 42,861
ಯಾದಗಿರಿ 34 18,544 1,58,810 17,068
ರಾಯಚೂರು 37 23,538 2,02,670 21,772
ಕೊಪ್ಪಳ 7 4,230 34,204 3,850
ಬಳ್ಳಾರಿ 106 50,177 3,00,212 42,861
ಈಗಲಾದರೂ ಸರ್ಕಾರ ತೀವ್ರ ಸಂಕಷ್ಟದಲ್ಲಿರುವ ರೈತರ ತೊಗರಿ ಬಾಕಿ ಶೀಘ್ರ ಪಾವತಿಸುವ ಮೂಲಕ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಪೂರಕ ವ್ಯವಸ್ಥೆ ಮಾಡಿಕೊಡಬೇಕಿದೆ.

ಸರ್ಕಾರ ತೊಗರಿ ಖರೀದಿ ಮಾಡಿದೆ. ಅದಕ್ಕನುಗುಣವಾಗಿ ರೈತರಿಗೆ ಹಣ ಪಾವತಿಸುವುದು ಅಷ್ಟೇ ಮುಖ್ಯ. ಆದರೆ ಸಾವಿರಾರು ರೈತರು ತಮ್ಮ ಬಾಕಿಗಾಗಿ ಇನ್ನೂ ಕಾದು ಕುಳಿತಿದ್ದಾರೆ. ಹಣ ಬಾರದಿದ್ದರೆ ಕೃಷಿ ಚಟುವಟಿಕೆ ನಿಂತುಹೋಗಲಿದೆ. ಸಕರ್ಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಹಣ ಬಿಡುಗಡೆ ಮಾಡಬೇಕು.
ಆದಿನಾಥ ಹೀರಾ,
ಪ್ರಗತಿಪರ ರೈತ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net