ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

IMG_20241203_112704
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
Published on

*ದಲಿತ ಜನಾಂಗದ ಭೂಮಿ ಅಕ್ರಮವಾಗಿ ಕಬಳಿಕೆ ಆರೋಪ

*ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಕೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪಿ.ಸಿ.ವರ್ಗೀಸ್ ಕಾಲೋನಿಯ ದಲಿತ ಜನಾಂಗದವರಿಗೆ ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಶಾಂತರೀತಿಯಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ಗುಂಡ್ಲುಪೇಟೆಯ ಪಿ.ಸಿ.ವರ್ಗೀಸ್ ಕಾಲೋನಿಯ ಸುಮಾರು 60 ದಲಿತ ಕುಟುಂಬಗಳಿಗೆ ಸರ್ಕಾರದಿಂದ ದರಾಖಾಸ್ತು ಮೂಲಕವಾಗಿ ಯಡವನಹಳ್ಳಿ ಗ್ರಾಮದ ಸರ್ವೇ ನಂ. 457, 448, 449 ರಲ್ಲಿ ಜಮೀನು ನೀಡಲಾಗಿತ್ತು. ಈ ಸಂಬಂಧ ಅವರಿಗೆ ಸಾಗುವಳಿ ಪತ್ರವನ್ನು ನೀಡಿದ್ದು, ಅವರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೇ ಇತ್ತೀಚೆಗೆ ತಮಿಳುನಾಡು ಮೂಲದ ಕಣ್ಣನ್, ವಾಸುದೇವನ್, ಸುಕುಮಾರ್ ಎಂಬ ವ್ಯಕ್ತಿಗಳು ಸರ್ಕಾರದ ಸೌಲಭ್ಯಗಳನ್ನು ಕೊಡಿಸುವದುದಾಗಿ ಅಕ್ರಮವಾಗಿ ದಲಿತರ ಜಮೀನನ್ನು ಕಬಳಿಕೆ ಮಾಡಿದ್ದಾರೆ. ದಲಿತ ಜಮೀನಿಗೆ ಅಕ್ರಮವಾಗಿ ತಂತಿ ಬೇಲಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.

ಪ್ರಸ್ತುತ ಬೋವಿ ದಲಿತ ಜನಾಂಗದವರು ವಾಸಮಾಡುತ್ತಿರುವ ಪಿ.ಸಿ.ವರ್ಗೀಸ್ ಕಾಲೋನಿಯಲ್ಲಿ ಮೂಲಸೌಕರ್ಯ ಕೊರತೆ ಇದೆ. ಕಾಡು ಪ್ರಾಣಿಗಳ ಹಾವಳಿಯಿಂದ ಜನರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ. ಕಾಲೋನಿಗೆ ಯಾವುದೇ ಮೂಲಸೌಕರ್ಯ ಇಲ್ಲದ ಪರಿಣಾಮವಾಗಿ ಜನರು ಗ್ರಾಮವನ್ನು ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ದಲಿತರ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು. ಜಮೀನಿನಲ್ಲಿರುವ ತಂತಿ ಬೇಲಿಯನ್ನು ತೆರವುಗೊಳಿಸಬೇಕು. ಕಾಲೋನಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ, ಸಿದ್ದರಾಜು ಹಂಗಳ, ಡ್ಯಾನ್ಸ್ ಬಸವರಾಜು, ಜಿ.ಎಂ.ಶಂಕರ್, ಸೋಮು, ಮನು, ರಾಚಪ್ಪ, ಕುಮಾರ್, ಸೋಮೇಶ್, ರಂಗನಾಯಕ, ಮಹೇಶ್ವರಿ, ರತ್ನಮ್ಮ, ಚಿನ್ನಮ್ಮ, ಸಿ.ಎಂ.ಶಂಕರ್, ಸುಂದರ್, ಸಿ.ಎಚ್.ರಂಗಸ್ವಾಮಿ, ಕೋಡಹಳ್ಳಿ ರಾಜು, ಕುಮಾರ್ ಪುಟ್ಟಬುದ್ಧಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net