ರೈತ ಸದಸ್ಯರಿಗೆ ಸಿಗಲಿದೆ ಶೂನ್ಯ ಬಡ್ಡಿದರದ ಸಾಲ

18..2
ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದ ಪಿಕೆಪಿಸ್‌ಗೆ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು. ಶೀತಲಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ಪ್ರಶಾಂತ ಕುಸನಾಳೆ, ಮನೋಹರ ಚೌಗುಲಾ ಇತರರಿದ್ದರು.
Published on

ಕಾಗವಾಡ: ತಾಲೂಕಿನ ಉಗಾರ ಬಿಕೆ ಗ್ರಾಮದವರಾದ ಅಥಣಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ ನೇತೃತ್ವದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಾಲಗಾರರ ಕ್ಷೇತ್ರದಿಂದ ಕಲಗೌಡ ಉರ್ಫ್ ಶೀತಲಗೌಡ ಪಾಟೀಲ, ಪ್ರಶಾಂತ ಕುಸನಾಳೆ, ಮಹಾವೀರ ವಸವಾಡೆ, ಪದ್ಮಕುಮಾರ ಆಳಪ್ಪನವರ, ರಾವಸಾಬ ಗಿಡ್ಡಸಕ್ಕನವರ, ಸಂಗೀತಾ ಹೊಸುರೆ, ಪದ್ಮಾ ರಾಜುರೆ, ಮಲ್ಲಪ್ಪ ಕುರಬರ, ಬಾಳಾಸಾಬ ಹವಲೆ, ಸಾಗರ ಪೂಜಾರಿ, ಸದಾಶಿವ ನಾಯಿಕ, ಬಿನ್ ಸಾಲಗಾರರ ಕ್ಷೇತ್ರದಿಂದ ಪ್ರವೀಣ ಪಾಟೀಲ ಆಯ್ಕೆಯಾಗಿದ್ದಾರೆ.


ಶೀತಲಗೌಡ ಪಾಟೀಲ ಮಾತನಾಡಿ, ಶತಮಾನದ ಇತಿಹಾಸವಿರುವ ಸಂಘಕ್ಕೆ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಮುತುವರ್ಜಿಯಿಂದ 10.72 ಕೋಟಿ ರೂ. ಸಾಲ ಮಂಜೂರು ಮಾಡಿಸಿದ್ದಾರೆ. ಇದರಿಂದ ಗ್ರಾಮದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗಲಿದೆ ಎಂದರು.
ಚುನಾವಣಾಕಾರಿಯಾಗಿ ಆಶಾ ಬಿರಾದಾರ ಹಾಗೂ ಉಪಚುನಾವಣಾಕಾರಿಯಾಗಿ ಬಾಹುಬಲಿ ಚಿಂಚವಾಡೆ ಕಾರ್ಯನಿರ್ವಹಿಸಿದರು.


ಗ್ರಾಪಂ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಮನೋಜ ಕುಸನಾಳೆ, ಮನೋಹರ ಚೌಗುಲಾ, ಅಣ್ಣಾಸಾಬ ನಂದಗಾಂವ, ದೀಪಕ ಪಾಟೀಲ, ಪದ್ಮಣ್ಣ ಚೌಗುಲೆ, ನವೀಣ ಚೌಗುಲೆ, ಅಕ್ಷಯ ಚೌಗುಲೆ, ಅಮೀನ ಶೇಖ, ದಿಲಾವರ ನೇಜಕರ, ಸಿಇಒ ಬಾಹುಬಲಿ ಚಿಂಚವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net