ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಕಳವು

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಕಳವು
Published on

ಹಾಸನ : ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿಟ್ಟಿದ್ದ 59 ಸಾವಿರ ರೂ. ಮೌಲ್ಯದ ಬಿತ್ತನೆ ಬೀಜ ಕಳವು ಮಾಡಿರುವ ಘಟನೆ ತಾಲೂಕಿನ ಸಾಲಗಾಮೆಯಲ್ಲಿ ನಡೆದಿದೆ.
ಅ. 3ರ ರಾತ್ರಿ ಗೋದಾಮಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಗಂಗಾ ಕಾವೇರಿ ಜಿ.ಕೆ.3059 ಮಾರ್ಕಿನ 12,560 ರೂ. ಬೆಲೆ ಬಾಳುವ ಒಂದು ಚೀಲ, ಜಿ.ಕೆ. ಗಂಗಾ ಕಾವೇರಿ 3218 ಮಾರ್ಕಿನ 24,400 ರೂ. ಬೆಲೆ ಬಾಳುವ 2 ಚೀಲ, ಐಟೆಕ್ ಮಾರ್ಕಿನ 20,160 ರೂ. ಬೆಲೆಯ 2 ಚೀಲ, ಐಟೆಕ್ ಮಾರ್ಕಿನ 2240 ಬೆಲೆ ಬಾಳುವ 2 ಪ್ಯಾಕೇಟ್ ಬಿತ್ತನೆ ಬೀಜ ಕಳವು ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net