

ನರೇಗಲ್ಲ: ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಅವರ ಆದಾಯ ದ್ವಿಗುಣಗೊಳಿಸಲು ಕೃಷಿ ಹಾಗೂ ಸಂಬಂಧಿತ ವಿವಿಧ ಕ್ಷೇತ್ರಗಳನ್ನು ಸಮಗ್ರವಾಗಿ ಸಂಯೋಜಿತ ವಿಧಾನದಲ್ಲಿ ಏಕೀಕರಿಸುವುದು ಅತ್ಯವಶ್ಯಕವಾಗಿದೆ ಎಂದು ರೋಣ ತಾಲೂಕು ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಹೇಳಿದರು.
ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತ ಸಂಪರ್ಕ ಕೇಂದ್ರಗಳನ್ನು ನೋಡಲ್ ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸಲು ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರ ಸಭೆಯನ್ನು ತಿಂಗಳಲ್ಲಿ ಎರಡು ಬಾರಿ ನಡೆಸಲು ಕೃಷಿ ಇಲಾಖೆ ಆದೇಶಿಸಿದೆ ಎಂದರು.
ರೋಣ ತಾಲೂಕಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಗಾಡಗೋಳಿಯ ರವಿ ಬೊಮ್ಮನಗೌಡ್ರ, ನರೇಗಲ್ಲನ ನಿಂಗನಗೌಡ ಲಕ್ಕನಗೌಡ್ರ, ಕೌಜಗೇರಿಯ ಬಸವರಾಜ ಸಜ್ಜನರ, ಕುಂಟೋಜಿಯ ನೀಲಪ್ಪ ಚೋಟಿ, ಮೆಣಸಗಿಯ ರವಿ ಬಾಣದ ಅವರಿಗೆ ಆತ್ಮ ಯೋಜನೆಯಡಿ ತಲಾ 10 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ನರೇಗಲ್ಲ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜಗದೀಶ ಹಾದಿಮನಿ, ಸಿ.ಕೆ. ಕಮ್ಮಾರ, ಆತ್ಮ ಯೋಜನೆಯ ಅಧಿಕಾರಿ ನಿಶಾಂತ ಬಂಕಾಪೂರ, ಮಂಜುನಾಥ ಬೀಳಗಿ, ಪಶು ವೈದ್ಯ ಡಾ. ಎಲ್.ಎಸ್. ಗೌರಿಮಠ, ರೈತರಾದ ಶರಣಪ್ಪ ಪೂಜಾರ, ಪ್ರದೀಪ ಹೂಗಾರ, ಫಕೀರಪ್ಪ ಬಂಬಲಾಪೂರ, ರವಿ ಆಡೂರ, ವಿಜಯಲಕ್ಷ್ಮೀ ಹುಯಿಲಗೋಳ, ಅಕ್ಕಮಹಾದೇವಿ ಪಾಟೀಲ, ಜಯಶ್ರೀ ಆಲೂರ, ಕಮಲಾಕ್ಷಿ ತೇಜಪ್ಪನವರ, ಅನುವುಗಾರರಾದ ಬಸವರಾಜ ಹಡಪದ, ಬಸವರಾಜ ರೊಟ್ಟಿ, ಶರಣಪ್ಪ ಹಡಪದ ಇತರರಿದ್ದರು. ಸಿಬ್ಬಂದಿ ಅನೀಲ ಕೊಪ್ಪದ ಕಾರ್ಯಕ್ರಮ ನಿರ್ವಹಿಸಿದರು.