ರೈತ ಸಂಘದಿಂದ ಪ್ರತಿಭಟನೆ

09M.D.R.1
ಮದ್ದೂರು ತಾಲೂಕಿನ ಕೊಪ್ಪದಲ್ಲಿ ರೈತ ಸಂಘದಿಂದ ಮದ್ದೂರು-ನಾಗಮಂಗಲ ಮಾರ್ಗದ ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಯಿತು.
Published on

ಮದ್ದೂರು: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಸರ್ಕಾರ ಟನ್ ಕಬ್ಬಿಗೆ 5400 ರೂ. ದರ ನಿಗದಿ ಮಾಡಬೇಕು. ಲೀಟರ್ ಹಾಲಿನ ದರವನ್ನು 50 ರೂ.ಗೆ ಹೆಚ್ಚಿಸಬೇಕು. ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸಿ ಸ್ಥಳದಲ್ಲೇ ಹಣ ಪಾವತಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನವೀನ್, ಹುರಗಲವಾಡಿ ರಾಮಯ್ಯ, ಉಮೇಶ್, ಮೂಡ್ಯ ಚನ್ನೇಗೌಡ, ವೆಂಕಟೇಶ್, ರಮೇಶ್, ರಾಮೇಗೌಡ, ಲಿಂಗರಾಜು, ಚಂದ್ರು, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net