ರೈತ ವಿರೋಧಿ ಕಾಂಗ್ರೆಸ್ ಸರಕಾರ

20230805_113337 copy
Published on

ಯಾದಗಿರಿ: ರಾಜ್ಯ ಸರಕಾರ ಐದು ಗ್ಯಾರಂಟಿಗಳ ಸುಳಿಯಲ್ಲಿ ಸಿಲುಕಿ ರೈತ ವಿರೋ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಕರಣಗಿ ಆರೋಪಿಸಿದರು.
ನಮ್ಮ ಸರಕಾರ ಅಕಾರದಲ್ಲಿದ್ದಾಗ ಭೂಸಿರಿ, ರೈತ ವಿದ್ಯಾನಿ, ಕೃಷಿ ಸಮ್ಮಾನ್ ಹಾಗೂ ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದ ನಂತರ ಈ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರಕಾರದ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತಪರ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ಅಲ್ಲದೆ 4 ತಿಂಗಳಲ್ಲಿ ರಾಜ್ಯಾದ್ಯಂತ 42ಕ್ಕೂ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಅಕಾರಕ್ಕೆ ಬಂದು 9 ವರ್ಷ ಕಳೆದಿದ್ದು, ಈ ಅವಯಲ್ಲಿ ರೈತರಿಗೆ ಒಳಿತಾಗುವ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಕೃಷಿ ಸಮ್ಮಾನ್ ಯೋಜನೆ ಅನ್ನದಾತರನ್ನು ಆಥರ್ಿಕವಾಗಿ ಗಟ್ಟಿಗೊಳಿಸಲು ಸಹಕಾರಿಯಾಗಿದೆ. ರಾಜ್ಯ ಸರಕಾರದ ರೈತ ವಿರೋ ಧೋರಣೆ ಖಂಡಿಸಿ ಆ.07ರಂದು ನಗರದಲ್ಲಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಪ್ರಮುಖರಾದ ಶ್ರೀದೇವಿ ಶೆಟ್ಟಿಹಳ್ಳಿ, ವೆಂಕಟರಡ್ಡಿ ಅಬ್ಬೆತುಮಕೂರು, ಚಂದ್ರಶೇಖರ ಮುಂಡರಗಿ, ಭೀಮರಾಯ ಜಂಗಳಿ, ಚಂದ್ರು ಕಡೆಸೂರು ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net