ರೈತ ಮಾಲ್​ ಸ್ಥಾಪನೆಗೆ ಸಹಕಾರಿ ಸಹಮತ : ಡಿಸಿಸಿ ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿಗೆ, ಸಮಾನ ಮನಸ್ಕರನ್ನು ಒಗ್ಗೂಡಿಸಿದ ಎಂಎಲ್​ಸಿ ಅನಿಲ್​ ಕುಮಾರ್​

2
Published on

ಕೋಲಾರ: ವ್ಯವಸಾಯಕ್ಕೆ ಬೇಕಾದ ಗುಣಮಟ್ಟದ ಪದಾರ್ಥಗಳು ಹಾಗೂ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ಮಾಲ್​ ಸ್ಥಾಪನೆ ಆಗಲಿದೆ.

ನಗರದ ಜಿಪಂನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪ್ರತಿನಿಧಿಗಳು, ಕೃಷಿ ತರು, ಸಹಕಾರಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಈ ಬಗ್ಗೆ ಒಮ್ಮತದಿಂದ ತೀರ್ಮಾನಿಸಲಾಯಿತು.

ಶಾಸಕ, ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರನ್ನು ಶೋಷಣೆ ಮಾಡುತ್ತಿರುವ ಗೊಬ್ಬರ, ಬೀಜ, ಔಷಧ ವ್ಯಾಪಾರಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಾಲ್​ ಸ್ಥಾಪನೆಗೆ ಚಿಂತಿಸಿದ್ದು, ಎರಡೂ ಜಿಲ್ಲೆಯ ರೈತರು, ಸಹಕಾರಿಗಳು ಹಾಗೂ ತರ ಸಲಹೆ ಸಹಕಾರ ಪಡೆದು ಆದಷ್ಟು ಬೇಗನೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್​ ಹಾಗೂ ಆಯಾ ತಾಲೂಕಿನ ಟಿಎಪಿಸಿಎಂಎಸ್​ ಹಾಗೂ ಫ್ಯಾಕ್ಸ್​ಗಳ ಸಹಕಾರದಿಂದ ಸ್ಥಾಪಿಸಬಹುದಾಗಿದೆ. ಕೇವಲ ವ್ಯಾಪಾರ&ವಹಿವಾಟು ಮಾತ್ರವಲ್ಲದೆ, ತಂತ್ರಜ್ಞಾನ ಕುರಿತು ತರಿಂದ ಅರಿವು ಮೂಡಿಸಲಾಗುತ್ತದೆ, ಬೆಳೆ, ಔಷಧ, ಆದಾಯ ಗಳಿಕೆ ಮಾಹಿತಿ ಜತೆಗೆ ತರಬೇತಿ ಸಹ ನೀಡಲಾಗುತ್ತದೆ ಎಂದರು.

ತರ ಸಮಿತಿ ರಚಿಸಲು ಸಲಹೆ: ಮಾಜಿ ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯುವ ತರಕಾರಿ, ಮಾವು ಇತ್ಯಾದಿ ಪದಾರ್ಥಗಳ ಸಂರಕ್ಷಣೆಗೆ ಸಂಸ್ಕರಣಾ ಟಕ ನಿರ್ಮಿಸಿದರೆ ಸಾಲದು, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂ ಮುಖ್ಯ. ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಮಾಲ್​ ಸ್ಥಾಪನೆಗೆ ಪ್ರಯತ್ನ ನಡೆದಿದೆ ಎಂದರು.

ರೈತ ಮಾಲ್​ ಸ್ಥಾಪನೆ ಸುಲಭ, ಆದರೆ ಸುಗಮವಾಗಿ ಚಟುವಟಿಕೆ ನಡೆಸುವುದು ಕಷ್ಟ. ಹಾಗಾಗಿ ತರ ಸಮಿತಿ ರಚನೆ, ವಿಶೇಷ ಅಧಿಕಾರಿ ಹಾಗೂ ಷೇರುದಾರರ ನೋಂದಣಿಗೆ ಸಿಬ್ಬಂದಿ ನೇಮಕ ಮಾಡಿ ಪಂಜಾಬ್​ನಲ್ಲಿ ಈಗಾಗಲೇ ಸ್ಥಾಪಿಸಿರುವ ರೈತ ಬಜಾರ್​ಗೆ ಭೇಟಿ ನೀಡಿ ಸಮಗ್ರ ಅಧ್ಯಯನ ನಡೆಸಿದ ಬಳಿಕ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದೆಂದು ಸಲಹೆ ನೀಡಿದರು.

ಎಪಿಎಂಸಿ ನಂಬಿದರೆ ಸಾಲದು, ರೈತರನ್ನು ಶೋಷಿಸುತ್ತಿರುವ ಟ್ರೇಡರ್ಸ್​ ಹಾಗೂ ದಲ್ಲಾಳಿಗಳಿಂದ ಪಾರು ಮಾಡಬೇಕಾಗಿದೆ ಎಂದರು.

ಕಮಿಷನ್​ ಶೇ.40ಕ್ಕೆ ಏರಿಕೆ: ರೈತರು ಬೆಳೆದ ಬೆಳೆಗಳನ್ನು ದಲ್ಲಾಳಿಗಳು ಕಡಿಮೆ ದರಕ್ಕೆ ಖರೀದಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಶೇ. 6 ಇದ್ದ ಕಮಿಷನ್​ ದಂಧೆ ಈಗ ಶೇ.40ಕ್ಕೆ ಏರಿಕೆ ಆಗಿದೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಕೃಷ್ಣಬೈರೇಗೌಡ ಟೀಕಿಸಿದರು.

ಹಾಲು ಉತ್ಪಾದಕರ ಸಂ ಮಾದರಿ: ರೈತ ಮಾಲ್​ ಸ್ಥಾಪನೆಗಾಗಿ ನಡೆದಿರುವ ಪ್ರಯತ್ನ ಶ್ಲಾನೀಯ. ಈ ಯೋಜನೆಗೆ ಈಗಾಗಲೇ ಎರಡೂ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಗಳ ಚಟುವಟಿಕೆ ಮಾದರಿಯಾಗಲಿ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಡಿಸಿಸಿ ಬ್ಯಾಂಕ್​ನಿಂದ ಸಾಲ: ಮಾಲ್​ ಸ್ಥಾಪಿಸಲು ಡಿಸಿಸಿ ಬ್ಯಾಂಕಿಗೆ ಅವಕಾಶವಿಲ್ಲ. ಕೃಷಿ ಪತ್ತಿನ ಸಹಕಾರ ಸಂ ಇಲ್ಲವೇ ಎಫ್​ಪಿಒಗಳು ಅಥವಾ ಸಹಕಾರ ತತ್ವದಡಿ ರಚನೆಗೊಂಡಿರುವ ಸಂಸ್ಥೆಗಳು ಮುಂದೆ ಬಂದಲ್ಲಿ ಸಾಲ ನೀಡಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ನ್ಯಾನೋ ಗೊಬ್ಬರ: ಕ್ರಿಫೋ ಟೊಕಿಯೋ ಕಂಪನಿ ರೈತರ ಅನುಕೂಲಕ್ಕಾಗಿ ನ್ಯಾನೋ ಗೊಬ್ಬರ ಕಂಡುಹಿಡಿದಿದೆ. ರೈತ ಮಾಲ್​ ಸ್ಥಾಪಿಸಿದಲ್ಲಿ ನಮ್ಮ ಸಂಸ್ಥೆಯಿಂದ ನ್ಯಾನೋ ಗೊಬ್ಬರ ಸಿಂಪಡಣೆಯನ್ನು ಕೈಗೆಟಕುವ ದರಕ್ಕೆ ಮಾರಾಟ ಮಾಡಲು ಅವಕಾಶ ಮಾಡಿಕೊಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಬಂಗಾರಪೇಟೆಯ ಎಸ್​.ಎನ್​.ನಾರಾಯಣಸ್ವಾಮಿ, ಎಂಎಲ್ಸಿ ನಾಸೀರ್​ ಅಹಮ್ಮದ್​, ಅನಿಲ್​ ಕುಮಾರ್​, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್​, ಡಾ.ಎಂ.ಸಿ.ಸುಧಾಕರ್​, ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ನಾಗರಾಜ್​, ಕೋಚಿಮುಲ್​ ನಿರ್ದೇಶಕ ಅಶ್ವತ್ಥ್​ ನಾರಾಯಣ, ಹನುಮೇಶ್​, ಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ನೀಲಕಂಠೇಗೌಡ, ಹನುಮಂತರೆಡ್ಡಿ, ಕೋಲಾರ ಟಿಎಪಿಸಿಎಂಎಸ್​ ಅಧ್ಯಕ್ಷ, ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ, ಜಿಲ್ಲಾ ಸಹಕಾರ ಯೂನಿಯನ್​ ನಿರ್ದೇಶಕ ಅ.ಮು.ಲ್ಮನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್​, ಕೃಷಿ ತರಾದ ವೆಂಕಟರೆಡ್ಡಿ, ಕೃಷ್ಣಕುಮಾರ್​, ಡಾ.ಜಯರಾಮ್​, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪದೇವಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಗಾಯಿತ್ರಿ, ಕೋಚಿಮುಲ್​ ಮಾಜಿ ಅಧ್ಯಕ್ಷ ಬ್ಯಾಟಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net