ರೈತ ಜಮೀನಿಗೆ ಪ್ರಮಾಣಬದ್ಧ ನೀರು ಹರಿಸಿ

11-08-Shiva-4
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲ್ 69ರಲ್ಲಿ ಅಳತೆಪಟ್ಟಿ ಸರಿಪಡಿಸಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷ ಶಂಕರಗೌಡ ಹರವಿ, ಪದಾಕಾರಿಗಳಾದ ಅಮರೇಶ ಹೊಸಮನಿ, ಬಸನಗೌಡ ಬಲ್ಲಟಗಿ, ಎಂ.ಶರಣಗೌಡ ಮಾಲಿಪಾಟೀಲ್, ಅಮರೇಗೌಡ, ಚನ್ನಬಸವ ಪಾಟೀಲ್, ಕೆ.ಪಂಪನಗೌಡ, ಎಂ.ಶರಣಪ್ಪ ಇದ್ದರು.
Published on

ರಾಯಚೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲ್ 69ರಲ್ಲಿನ ಅಳತೆ ಪಟ್ಟಿ ಸರಿಪಡಿಸುವ ಮೂಲಕ ಮೈಲ್ 69ರ ನಂತರದ ರೈತರ ಜಮೀನುಗಳಿಗೆ ಪ್ರಮಾಣಬದ್ಧ ನೀರು ಹರಿಸುವಂತೆ ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆ ಒತ್ತಾಯಿಸಿದೆ.
ವೇದಿಕೆ ನಿಯೋಗ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ಶುಕ್ರವಾರ ಮನವಿ ಸಲ್ಲಿಸಿ, ಜಲಾಶಯದಿಂದ ಕಾಲುವೆಗೆ ನೀರು ಬಿಡುಗಡೆ ಮಾಡಿದ್ದು, ಆರಂಭದಲ್ಲಿಯೇ ಕಾಲುವೆಯಲ್ಲಿ ನೀರಿನ ನಿರ್ವಹಣೆ ಸಮಸ್ಯೆ ಎದುರಾಗುತ್ತಿದೆ. ಮುಂದಿನ ದಿನಗಳಲ್ಲಿ ಕಠಿಣ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಕೂಡಲೇ ಸಂಬಂಧಪಟ್ಟ ಅಕಾರಿಗಳ ಸಭೆ ನಡೆಸಿ ಸಮರ್ಪಕವಾಗಿ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಕಾಲುವೆ ಮೇಲೆ ನೀರಿನ ಕಳ್ಳತನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಬೇಕು. ಮೈಲ್ 69ರಲ್ಲಿ ನಿಗದಿತ ಗೇಜ್ ಕಾಪಾಡಬೇಕು.
ಕಾಲುವೆ ವ್ಯಾಪ್ತಿಯಲ್ಲಿನ ರೈತರು ಈಗಾಗಲೇ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದು, ಸಮರ್ಪಕ ನೀರು ಹರಿಸದಿದ್ದಲ್ಲಿ ರೈತರು ನಷ್ಟಕ್ಕೆ ಗುರಿಯಾಗುವಂತಾಗುತ್ತಿದೆ. ಕೂಡಲೇ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ವೇದಿಕೆ ಅಧ್ಯಕ್ಷ ಶಂಕರಗೌಡ ಹರವಿ, ಪದಾಕಾರಿಗಳಾದ ಅಮರೇಶ ಹೊಸಮನಿ, ಬಸನಗೌಡ ಬಲ್ಲಟಗಿ, ಎಂ.ಶರಣಗೌಡ ಮಾಲಿಪಾಟೀಲ್, ಅಮರೇಗೌಡ, ಚನ್ನಬಸವ ಪಾಟೀಲ್, ಕೆ.ಪಂಪನಗೌಡ, ಎಂ.ಶರಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net