ರೈತ ಚಳವಳಿ ಜೀವಂತವಾಗಿರಬೇಕು

26-pnp 2
Published on


ಪಾಂಡವಪುರ:ರೈತ ಚಳವಳಿ ಮತ್ತು ಹೋರಾಟಗಳು ಜೀವಂತವಾಗಿದ್ದಾಗ ಮಾತ್ರ ವ್ಯವಸ್ಥೆ ಸುಗಮವಾಗಿರುತ್ತದೆ ಎಂದು ಮುಖಂಡ ದರ್ಶನ್ ಪುಟ್ಟಣ್ಣಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಲಕ್ಷ್ಮೀಸಾಗರದಲ್ಲಿ ಆಯೋಜಿಸಿದ್ದ ರೈತ ನಾಯಕ ದಿ.ಕೆ.ಎಸ್. ಪುಟ್ಟಣ್ಣಯ್ಯ ಅವರ 5ನೇ ಪುಣ್ಯಸ್ಮರಣೆ ಹಾಗೂ ರೈತೋತ್ಸವದಲ್ಲಿ ಅವರು ಮಾತನಾಡಿದರು.
ನನ್ನ ತಂದೆ ಪುಟ್ಟಣ್ಣಯ್ಯ ಹೋರಾಟವನ್ನು ಕರ್ತವ್ಯದ ರೀತಿ ಮಾಡಿದ್ದಾರೆ. ಅದನ್ನು ನಾನು ಆದರ್ಶವಾಗಿ ಇಟ್ಟುಕೊಂಡಿದ್ದೇನೆ. ಚಳವಳಿ ಜೀವಂತವಾಗಿದ್ದರೆ ಮಾತ್ರ ರೈತ ಸಂಕುಲ ಉಳಿಯುತ್ತದೆ ಎಂದರು.
ನಾನು ಕೇವಲ ರಾಜಕಾರಣ ಮಾಡಲು ಅಮೆರಿಕದಿಂದ ಇಲ್ಲಿಗೆ ಬಂದಿಲ್ಲ. ನನ್ನ ತಂದೆ ಹಚ್ಚಿದ ಹೋರಾಟದ ಕಿಚ್ಚನ್ನು ಜೀವಂತವಾಗಿಡಲು ಬಂದಿದ್ದೇನೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕ್ಷೇತ್ರದ ಘನತೆ, ಗೌರವ ಕಾಪಾಡಲು ದರ್ಶನ್ ನೇತೃತ್ವ ಅಗತ್ಯವಾಗಿದೆ ಎಂದರು.
ರೈತ ನಾಯಕಿ ನಂದಿನಿ ಜಯರಾಮ್, ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ಲಕ್ಷ್ಮೀಸಾಗರ ಗ್ರಾಮ ಘಟಕದ ಅಧ್ಯಕ್ಷ ಎಲ್.ಆರ್. ಅಶೋಕ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಕೆ.ಟಿ.ಗೋವೀಂದೇಗೌಡ, ಪ್ರಸನ್ನ ಗೌಡ, ಅಮೃತಿ ರಾಜಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net