ರೈತ, ಕೃಷಿ ಕಾರ್ವಿುಕರಿಗೆ ಪರಿಹಾರ ನೀಡಿ

11MDG3
Published on

ಮುಂಡರಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಪಟ್ಟಣದ ವಿವಿಧ ಕಾರ್ವಿುಕ ಸಂಘಟನೆ ಕಾರ್ಯಕರ್ತರು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ನೇತೃತ್ವದಲ್ಲಿ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಕೆಲವು ವರ್ಗದವರಿಗೆ ಆರ್ಥಿಕ ನೆರವು ನೀಡಿರುವುದು ಸ್ವಾಗತಾರ್ಹ. ಆದರೆ, ಕೃಷಿ ಕೂಲಿ ಕಾರ್ವಿುಕರು, ಸಣ್ಣ ರೈತರನ್ನು ಕಡೆಗಣಿಸಿರುವುದು ಸರಿಯಲ್ಲ. ಎಲ್ಲ ರೈತರಿಗೂ 50 ಸಾವಿರ ರೂ. ಪರಿಹಾರ ನೀಡಬೇಕು. ಎಲ್ಲ ಬ್ಯಾಂಕ್​ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ನಗರ, ತಾಲೂಕು, ಹೋಬಳಿ, ಗ್ರಾಮ ಮಟ್ಟದ ಕ್ಷೌರಿಕರು, ಅಗಸರು, ಎಲ್ಲ ವಾಹನ ಚಾಲಕರು, ಹಮಾಲರು, ಚಮ್ಮಾರರಿಗೂ ಆರ್ಥಿಕ ನೆರವು ನೀಡಬೇಕು ಎಂದು ವೈ.ಎನ್. ಗೌಡರ ಒತ್ತಾಯಿಸಿದರು.

ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಕಾಶಪ್ಪ ಮೋರನಾಳ, ರಾಜಕುಮಾರ ದಂಡಿನ, ಸುರೇಶ ಮೇಕನಾಳ, ಚಂದ್ರಕಾಂತ ಉಳ್ಳಾಗಡ್ಡಿ, ವಿಜಯಕುಮಾರ ರಾಟಿ, ಕೃಷ್ಣ ತೇರದಾಳ, ಮೌಲಾಸಾಬ್ ಬಾಗವಾನ, ಮೋದಿನಸಾಬ್ ಡಂಬಳ, ರೇಣುಕಾ ಅಗಸಿಮನಿ, ಶ್ರುತಿ ಅಗಸಿಮನಿ, ಸರಸ್ವತಿ ಬೆಳದಡಿ, ಸರೋಜಾ ಅಗಸಿಮನಿ, ಫಕೀರಪ್ಪ ಚಲವಾದಿ, ಖಾಜಾಸಾಬ್ ಕಲಕೇರಿ, ರಾಜಸಾಬ್ ಕಲೆಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net