ರೈತ ಕುಟುಂಬಕ್ಕೆ ಸಾಗುವಳಿ ಪತ್ರ ವಿತರಣೆ

22 SARAG1 (1)
ಸರಗೂರು ತಾಲೂಕಿನ ಜಯಲಕ್ಷ್ಮೀಪುರಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಫಲಾನುಭವಿಗೆ ಸಾಗುವಳಿ ಪತ್ರ ವಿತರಣೆ ಮಾಡಿದರು. ಚಲುವರಾಜು, ಸುನೀಲ್, ಶಿವಲಿಂಗಯ್ಯ, ಭಾಗ್ಯಮ್ಮ ನಾಗೇಂದ್ರ, ಚಿಕ್ಕಕ್ಯಾತ, ವೆಂಕಟರಾಮು ಇದ್ದರು.
Published on

ಸರಗೂರು: ತಾಲೂಕಿನ ಕಾಡಂಚಿನ ಗಡಿಯಲ್ಲಿರುವ ಹಾದನೂರು ಮತ್ತು ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ, ಚನ್ನಗುಂಡಿ, ಚನ್ನಗುಂಡಿ ಕಾಲನಿ ಮತ್ತು ಜಯಲಕ್ಷ್ಮೀಪುರ ಗ್ರಾಮದ ಸುಮಾರು 60 ರೈತ ಕುಟುಂಬಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಬುಧವಾರ ಸಾಗುವಳಿ ಪತ್ರ ವಿತರಿಸಿದರು.

ಕಳೆದ ಮೂರ‌್ನಾಲ್ಕು ತಲೆಮಾರುಗಳಿಂದ ಜಮೀನಿನ ಹಕ್ಕುಪತ್ರವಿಲ್ಲದ ಕಾರಣ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ರೈತರಿಗೆ ಸಿಹಿ ತಿನಿಸುವ ಮೂಲಕ ಜಮೀನಿನ ಹಕ್ಕಪತ್ರದ ಆದೇಶ ಪತ್ರಗಳನ್ನು ಶಾಸಕರು ನೀಡುವ ಮೂಲಕ ರೈತರಲ್ಲಿ ಆಶಾಭಾವನೆ ಮೂಡಿಸಿದರು.

ಅತಿವೃಷ್ಟಿ ಹಾಗೂ ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾದಾಗ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಸರ್ಕಾರದ ಯೋಜನೆಗಳು ರೈತರಿಗೆ ದೊರಕದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅನಿಲ್ ಚಿಕ್ಕಮಾದು ಮನೆ ಮನೆಗೆ ಭೇಟಿ ನೀಡಿ ಹಕ್ಕುಪತ್ರ ವಿತರಿಸಿರುವುದು ಸಂತಸ ಮೂಡಿಸಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು. ಪ್ರತಿ ಮನೆಯಲ್ಲೂ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ತಹಸೀಲ್ದಾರ್ ಚಲುವರಾಜು, ಉಪತಹಸೀಲ್ದಾರ್ ಸುನೀಲ್, ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ, ಭಾಗ್ಯಮ್ಮ, ಚಿಕ್ಕಕ್ಯಾತ, ವೆಂಕಟರಾಮು, ಮುಖಂಡರಾದ ಅಣ್ಣಯ್ಯಸ್ವಾಮಿ, ಆನಂದ್, ಮಹೇಂದ್ರಕುಮಾರ್, ಪುಟ್ಟಸ್ವಾಮಿ, ಎಚ್.ಎನ್.ಸುರೇಶ್, ಬ್ರಹ್ಮದೇವಣ್ಣ, ಶಿವಲಿಂಗಪ್ಪ, ಶೇಖರ್, ಕುಮಾರ್, ದೊರೆಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net