ರೈತ ಇದ್ದರೆ ಜಗತ್ತು ಉಳಿಯಲು ಸಾಧ್ಯ

13Rayabag1
Published on

ರಾಯಬಾಗ: ಸಮಾಜ ನಿರ್ಮಾಣದಲ್ಲಿ ತೊಡಗಿರುವ ಮಠಮಾನ್ಯಗಳ ಜತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಬೀಳಗಿ ಕೃಷಿ ಪಂಡಿತ ಸಿದ್ದಪ್ಪ ಬಿದರಿ ಹೇಳಿದರು.

ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೩೮ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ರೈತರು ಹಣದ ವ್ಯಾಮೋಹಕ್ಕೆ ಒಳಗಾಗಿ, ಬೆಳೆಗಳಿಗೆ ರಾಸಾಯನಿಕ ಬಳಸಿ ಭೂಮಾತೆಗೆ ವಿಷ ಉಣಿಸುವ ಕಾರ್ಯದಲ್ಲಿ ತೊಡಗಿರುವುದು ಖೇದಕರ ಸಂಗತಿ. ಭೂಮಿ ಇದ್ದರೆ ರೈತ, ರೈತ ಇದ್ದರೆ ಜಗತ್ತು ಉಳಿಯಲು ಸಾಧ್ಯ ಎಂದರು.

ಮೊಳವಾಡದ ಹರಿಭಕ್ತ ಸುಭಾಷ ಶೇವಾಳಗಿ ಮಾತನಾಡಿ, ಸಕಲ ಜೀವರಾಶಿಗಳಿಗೆ ಆಶ್ರಯವಾಗಿರುವ ಭೂಮಾತೆ ರಕ್ಷಣೆಯನ್ನು ಎಲ್ಲರೂ ಸೇರಿ ಮಾಡಬೇಕು. ಮಣ್ಣಿನಲ್ಲಿ ಹೊನ್ನು ಬೆಳೆಯಬಹುದು ಎಂದು ತಿಳಿಸಿದರು.

ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ, ಭೃಮರಾಂಬಿಕಾ ಶಿವಯೋಗಿ, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ಎಲ್.ಬಿ.ಚೌಗಲಾ, ಷಣ್ಮುಖ ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net