ರೈತ ಆತ್ಮಹತ್ಯೆ ತಡೆಗೆ ಮುಂದಾಗಲಿ

08ydg02
Published on

ಯಾದಗಿರಿ: ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗೆ ಸಕರ್ಾರ ಕಠಿಣ ನಿಧರ್ಾರ ಕೈಗೊಳ್ಳಲು ಆಗ್ರಹಿಸಿ ಶುಕ್ರವಾರ ಜಿಲ್ಲಾ ಬಿಜೆಪಿಯಿಂದ ಇಲ್ಲಿನ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುದ್ನಾಳ್, ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಅಕಾರಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮುಂಗಾರು ಮಳೆ ಈ ಬಾರಿ ಕೈಕೊಟ್ಟ ಕಾರಣ ಬರಗಾಲ ಸ್ಥಿತಿ ನಿಮರ್ಾಣಗೊಂಡಿದೆ. ಇದಲ್ಲದೆ ಲೋಡ್ಶೆಡ್ಡಿಂಗ್ ಕಿರಿಕಿರಿಯಿಂದ ರೈತರ ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗದೆ ಅನ್ನದಾತರ ನಿದ್ದೆಗೆಡಿಸಿದೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ಹಗಲೊತ್ತಿನಲ್ಲಿ ಲೋಡ್ಶೆಡ್ಡಿಂಗ್ ಮಾಡುತ್ತಿರುವ ಕಾರಣ ರೈತರ ಬೆಳೆಗಳಿಗೆ ನೀರು ಕಾಣದೆ, ಒಣಗುತ್ತಿವೆ. ಈಗಾಗಲೇ ಶೇ.90ರಷ್ಟು ಬಿತ್ತನೆ ಕಾರ್ಯವಾಗಿದ್ದು, ಮಳೆ ಇಲ್ಲದ ಕಾರಣ ಪಂಪ್ಸೆಟ್ ಮೇಲೆ ರೈತಾಪಿ ವರ್ಗ ಅವಲಂಬನೆಯಾಗಿದೆ. ಸಕಾಲಕ್ಕೆ ಬೆಳೆಗಳಿಗೆ ನೀರು ಸಿಗದಿದ್ದರೆ ಲಕ್ಷಾಂತರ ರೂ.ಸಾಲ ಮಾಡಿ ಬೆಳೆದ ಬೆಳೆಗಳು ಹಾಳಾಗುತ್ತಿವೆ. ಈ ಬಗ್ಗೆ ಸಕರ್ಾರಕ್ಕೆ ಕಿಂಚಿತ್ತಾದರೂ ಕಾಳಜಿ ಇಲ್ಲ ಎಂದು ಹರಿಹಾಯ್ದರು.

ಇದಲ್ಲದೆ, ಕಾಂಗ್ರೆಸ್ ಸಕರ್ಾರ ಈ ಹಿಂದೆ ನಮ್ಮ ಸಕರ್ಾರದ ಹಲವು ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಸೇಡಿನ ರಾಜಕೀಯ ಮಾಡುತ್ತಿದೆ. ರೈತರಿಗೆ ಆಥರ್ಿಕ ಚೈತನ್ಯ ಕೊಡುವ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಅನ್ನದಾತರ ಖಾತೆಗೆ ಕೇಂದ್ರ ಸಕರ್ಾರ 6 ಹಾಗೂ ರಾಜ್ಯ ಸಕರ್ಾರ 4 ಸೇರಿ ಒಟ್ಟು 10 ಸಾವಿರ ರೂ.ಜಮೆ ಮಾಡಲಾಗುತ್ತಿತ್ತು. ಇದೀಗ ಸ್ಥಗಿತಗೊಳಿಸಲಾಗಿದೆ. ವಿದ್ಯಾನಿ, ಭೂಸಿರಿ, ಶ್ರಮಶಕ್ತಿ, ಎಪಿಎಂಸಿ ಕಾಯ್ದೆ ವಾಪಸ್, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ನಿಮರ್ಾಣದ ಯೋಜನೆ ಹಿಂಪಡೆದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಕರ್ಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ವರ್ಗಕ್ಕೆ ಹೆಚ್ಚಿನ ಪರಿಹಾರ ಒದಗಿಸಬೇಕು. ರೈತರ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ನೀಡಬೇಕು. ಲೋಡ್ಶೆಡ್ಡಿಂಗ್ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ನಗರಾಧ್ಯಕ್ಷ ಮಂಜುನಾಥ ಜಡಿ, ಜಿಲ್ಲಾ ವಕ್ತಾರ ಎಚ್ಸಿ ಪಾಟೀಲ್, ದೇವೀಂದ್ರನಾಥ ನಾದ್, ಪ್ರಮುಖರಾದ ಶರಣಗೌಡ ಬಾಡಿಯಾಳ, ಬಸವರಾಜ ಚಂಡರಕಿ, ದೇವರಾಜ ನಾಯಕ, ಗೋವಿಂದಪ್ಪ ಕೊಂಚಟ್ಟಿ, ಮೌನೇಶ ಬೆಳಗೇರಾ, ವೀಣಾ ಮೋದಿ, ಶ್ರೀದೇವಿ ಶೆಟ್ಟಿಹಳ್ಳಿ, ಮಲ್ಲಿಕಾಜರ್ುನ ಕಾಡಂನೂರ, ಶಂಕರ ಸೋನಾರ, ವಿರೂಪಾಕ್ಷಯ್ಯ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net