

ರಾಜ್ಯ ಸರಕಾರ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಕಾರ್ಡ್ ಪಡೆಯಲು ಎರಡು ದಿನ ಅವಕಾಶ ಕಲ್ಪಿಸಿದೆ. ಆದರೆ, ಮಾಹಿತಿ ಅಪಲೋಡ್ ಮಾಡಲು ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.
ಲೋಕಸಬಾ ಚುನಾವಣೆ ಮುಗಿದ ನಂತರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಂಗಳವಾರದಿಂದ ಎರಡು ದಿನ ಹೊಸ ಕಾರ್ಡ್ ಪಡೆಯಲು ಮತ್ತು ಹಳೆಯ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿ ಕೊಟ್ಟಿತ್ತು. ಇದರಿಂದ ನಗರಸಭೆಯ ಆವರಣದಲ್ಲಿರುವ ಕರ್ನಾಟಕ ಒನ್ ಗ್ರಾಮ ಸೇವ ಕೇಂದ್ರದಲ್ಲಿ ಜನರು ಮಳೆಯನ್ನು ಲೆಕ್ಕಿಸದೆ ಸಾರತಿ ಸಾಲಿನಲ್ಲಿ ನಿಂತಿದ್ದವರು ಸರ್ವ ಸಮಸ್ಯೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಗ್ಗೆಯಿಂದಲೇ ನೂರಾರು ಜನರು ನಗರಸಭೆ ಆವರಣದಲ್ಲಿ ಜಮಾಹಿಸಿದ್ದರು. ಆದರೆ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಮಾತ್ರ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಮಧ್ಯಾಹ್ನದವರೆಗೂ ಒಂದು ಕಾರ್ಡ್‌ಗೂ ನೋಂದಾವಣೆಯಾಗದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಕೇವಲ ಎರಡು ದಿನ ಅವಕಾಶ ಕಲ್ಪಿಸಿ ಜನರ ಜೊತೆ ಚೆಲ್ಲಾಂಟಾ ಆಡುತ್ತಿದ್ಧಾರೆ. ಕೆಲಸ ಕಾರ್ಯಗಳನ್ನು ಬಿಟ್ಟು, ಇಲ್ಲಿ ಬಂದು ಒಂದು ಕಾರ್ಡ್ ಕೂಡ ಇದುವರೆಗೂ ಅಪ್ಲೋಡ್ ಆಗುತ್ತಿಲ್ಲ. ಕೇವಲ ಜನರನ್ನ ಕಣ್ಣೊರೆಸುವ ತಂತ್ರ ಮಾಡುವ ಉದ್ದೇಶದಿಂದ ಹೊಸ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊಟ್ಟಂತೆ ಕೊಟ್ಟು, ಯಾವುದೇ ಕೆಲಸವಾಗುತ್ತಿಲ್ಲ, ಇದರ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಬುದುವಾರ ಒಂದು ದಿನ ಬಾಕಿ ಇದೆ. ಈ ದಿನವೂ ಕೂಡ ಆಗುವುದಿಲ್ಲ, ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟವರು ಈ ತಿದ್ದುಪಡಿ ಮತ್ತು ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಬೇಕು. ಇಲ್ಲವಾದರೆ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು