

ಕಲಬುರಗಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಕಳೆದ ೧೫ ವರ್ಷದಿಂದ ಅಧ್ಯಕ್ಷರಾಗಿರುವ ಗುಲ್ಬರ್ಗ ಜಿಲ್ಲಾ ಕೆಮಿಸ್ಟ್ ಆ್ಯಂಡ್ ಡ್ರಗಿಸ್ಟ್ ಭವನಕ್ಕೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ಸೈಟ್ ಪಡೆದಿದ್ದು, ಅದನ್ನು ವಾಣಿಜ್ಯ ಉz್ದೆÃಶಕ್ಕೆ ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಆರೋಪಿಸಿದರು.
ಸರ್ಕಾರದ ಅನುದಾನ ಬಳಸಿಕೊಂಡು ಸಮುದಾಯ ಭವನ ನಿರ್ಮಿಸಿದ್ದು, ಎಲ್ಲರಿಗೂ ಸೌಲಭ್ಯ ನೀಡುತ್ತಿಲ್ಲ. ಮದುವೆ ಮಂಟಪ ಮಾಡಿದ್ದಾರೆ. ವ್ಯಾಪಾರಕ್ಕಾಗಿ ನಿಯಮ ಮೀರಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಸುಮಾರು ೩೦ ಸಾವಿರ ಚದರ ಅಡಿ ನಿವೇಶನದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸುತ್ತಿದ್ದು, ಪಾಲಿಕೆಯಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಒಂದು ಕೋಟಿ ರೂ. ತೆರಿಗೆ ಭರಿಸದೆ ಮೊತ್ತ ಕಡಿಮೆ ಮಾಡಿಸಿ, ವಂಚಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಅವಧಿಯೂ ಮುಗಿದಿದ್ದು, ನಿಯಮ ಉಲ್ಲಂಘಿಸಿದ್ದಾರೆ. ಕೂಡಲೇ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ತೆರಿಗೆ ವಸೂಲಿಗೆ ಸೂಚನೆ ನೀಡಲಾಗುವುದು ಎಂದರು.
ಪ್ರಮುಖರಾದ ಎಂ.ಬಿ.ಪಾಟೀಲ್, ಲಿಂಗರಾಜ ಕಣ್ಣಿ ಇದ್ದರು.
ಶಿಕ್ಷಣದ ಉz್ದÉÃಶಕ್ಕೆ ಸೈಟ್ ಬಳಕೆ: ಶ್ರೀ ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಗೆ ನನ್ನ ಅಧ್ಯಕ್ಷತೆಯಲ್ಲಿ ೧೦ ಸದಸ್ಯರಿದ್ದು, ಧರಿಯಾಪುರ ಕೋಟನೂರದಲ್ಲಿ ಶಿಕ್ಷಣದ ಉz್ದÉÃಶಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ಸೈಟ್ ಪಡೆಯಲಾಗಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಯನ್ನು ಬೋಧಿಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಪಿಯುಸಿ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಸ್ಪಷ್ಟನೆ ನೀಡಿದರು. ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಒಂದು ರೂಪಾಯಿಯೂ ಗೊಲ್ಲಾಳೇಶ್ವರ ಸಂಸ್ಥೆಗೆ ಬಳಸಿಲ್ಲ. ಕೃಷ್ಣರಡ್ಡಿ ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದರು.