ರೇವಣಸಿದ್ಧೇಶ್ವರ ಮಹಾರಾಜ್ ಕಿ ಜೈ..

klb3
ಕಾಳಗಿ ತಾಲೂಕಿನ ರೇವಗ್ಗಿ (ರಟಕಲï) ಗುಡ್ಡದಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿAದ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಿತು.
Published on

ಕಾಳಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಪುಣ್ಯಕ್ಷೇತ್ರ ರೇವಗ್ಗಿ(ರಟಕಲï) ಗುಡ್ಡದಲ್ಲಿ ಶ್ರಾವಣ ನಡುವಿನ ಸೋಮವಾರದ ನಿಮಿತ್ತ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಅದ್ದೂರಿಯಾಗಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು.

ನಸುಕಿನ ಜಾವ 3 ಗಂಟೆಗೆ ಜಗದ್ಗುರು ಶ್ರೀ ರೇವಣಸಿದ್ಧೇಶ್ವರ ಮೂರ್ತಿಗೆ ಕಾಕಡಾರತಿ, 4ಕ್ಕೆ ತಪೋ ಗದ್ದುಗೆಗೆ ಸಹಸ್ರ ಬಿಲಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಜರುಗಿದವು. 10ಕ್ಕೆ ರೇವಗ್ಗಿಯ ದೇವರಮನಿ ಮನೆತನದಿಂದ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. 11ಕ್ಕೆ ಬೆಡಸೂರ, ರೇವಗ್ಗಿ, ರಟಕಲ್, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಗೆ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ಸಂಜೆ ದೇವಸ್ಥಾನದ ಸುತ್ತಲೂ ಶ್ರೀ ರೇವಣಸಿದ್ಧೇಶ್ವರರ ರಜತ ಪಲ್ಲಕ್ಕಿ ಉತ್ಸವ ಸಂಭ್ರಮದಿAದ ಜರುಗಿತು. ಅಪಾರ ಭಕ್ತರು ಶ್ರೀ ರೇವಣಸಿದ್ಧೇಶ್ವರ ಮಹಾರಾಜ್ ಕಿ ಜೈ.. ಸೇರಿ ವಿವಿಧ ಜೈಘೋಷಗಳು ಮೊಳಗಿದವು. ಜನರು ಪಲ್ಲಕ್ಕಿಗೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ, ಫಲ-ಪುಷ್ಪ ಸಮರ್ಪಿಸಿ ಕೃತಾರ್ಥರಾದರು. ಕೆಲವರು ಪಲ್ಲಕ್ಕಿ ಮುಂದೆ ಉರುಳು ಸೇವೆ ಮಾಡಿ ಹರಕೆ ತೀರಿಸಿದರು.

ರಟಕಲ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಶರಣರು, ಅರ್ಚಕ ಚನ್ನಬಸಪ್ಪ ದೇವರಮನಿ, ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಸಮಿತಿ ಅಧ್ಯP್ಷÀ ಪ್ರಭುರೆಡ್ಡಿ, ಪ್ರಮುಖರಾದ ನಾಗನಾಥ ತರಗೆ, ಸದಾಶಿವ ವಗ್ಗೆ, ಶಿವರಾಜ ಪಾಟೀಲ್ ಗೋಣಗಿ, ರುದ್ರಶೆಟ್ಟಿ ಗುರಮಠಕಲï, ಬಸವರಾಜ ಮಳಪ್ಪನೋರ, ಗಂಗಾಧರ ಸ್ವಾಮಿ ರೇವಗ್ಗಿ, ಶರಣುಸ್ವಾಮಿ ಹೆಮಡಾ ಮುಕರಂಬಾ, ಶಂಕರ ಚೌಕಾ, ಸಿದ್ದಯ್ಯಸ್ವಾಮಿ ಮುಕರಂಬಾ, ರೇವಣಸಿದ್ದಪ್ಪ ಚೇಂಗಟಿ, ವೀರಣ್ಣ ಗಂಗಾಣಿ, ರಾಜಶೇಖರ ಗುಡದಾ, ರೇವಣಸಿದ್ದ ಬಡಾ, ಚಂದ್ರಕಾAತ ಸೀಗಿ, ಸಿದ್ದು ಚಿಟ್ನಳಿ, ನಾಗೇಶ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ, ಗೌರಿಶಂಕರ ಕಿಣ್ಣಿ, ಚಂದ್ರಕಾAತ ರಮಾ, ರೇವಣಸಿದ್ದಪ್ಪ ಅರಣಕಲï, ರೇವಶೆಟ್ಟಿ ಪಾಟೀಲ್ ಇತರರಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳ ನೇತೃತ್ವದಲ್ಲಿ ಸುಮಾರು 200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಒದಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net