

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಕಾಲಗೆರೆ ಪಶು ಚಿಕಿತ್ಸಾಲಯದಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ರೇ ಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ರೋಗ ನಿಯಂತ್ರಣ ಜಾಗೃತಿ ಕಾರ‌್ಯಕ್ರಮ ಏರ್ಪಡಿಸಲಾಗಿತ್ತು. ರೇಬಿಸ್ ರೋಗ ತಡೆಗಟ್ಟುವ ಬಗ್ಗೆ,ಲಸಿಕೆ, ಆರೋಗ್ಯವಂಥ ಶ್ವಾನಗಳು ಹಾಗೂ ಹುಚ್ಚು ನಾಯಿಗಳಲ್ಲಿರುವ ಸ್ವಭಾವ ಲಕ್ಷಣ,ವ್ಯತ್ಯಾಸಗಳ ಕುರಿತಂತೆ ಪಶು ವೈದ್ಯಾಧಿಕಾರಿ ಡಾಕ್ಟರ್ ರಕ್ಷಿತ್ ಮಾ ತನಾಡಿದರು. ಮುಖ್ಯಶಿಕ್ಷಕಿ ನೇತ್ರಾವತಿ,ಶಿಕ್ಷಕ ಬಸವರಾಜಪ್ಪ,ಹಿರಿಯ ಪಶುವೈದ್ಯ ಪರೀಕ್ಷ ಕೆ.ಎನ್.ಪ್ರಕಾಶ್ ಮತ್ತಿತರರು ಇದ್ದರು.