

ಚಿತ್ರದುರ್ಗ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಚಿತ್ರದುರ್ಗ ಭೇಟಿ ರದ್ದಾಗಿದೆ. ಸೋಮವಾರ ಮಧ್ಯಾಹ್ನ 12.30ಕ್ಕೆ ಈಚೆಗೆ ದರ್ಶನ್‌ಗ್ಯಾಂಗ್‌ನಿಂದ ಹತ್ಯೆಗೊಳಗಾದ ರೇಣುಕಸ್ವಾಮಿ ಮನೆಗೆ ಗೃಹ ಸಚಿವರು ಭೇಟಿ ನೀಡ ಬೇಕಿತ್ತು. ಗೃಹ ಸಚಿವರು ಭೇಟಿ ಕುರಿತಂತೆ ಅಧಿಕೃತ ಮಾಹಿತಿ ಪ್ರಕಟವಾಗಿತ್ತು. ಆದರೆ ಅವರ ಭೇಟಿ ಸಮಯದ ಕೆಲ ಗಂಟೆಗಳ ಮೊದಲು ಕಾರ‌್ಯಕ್ರಮ ರದ್ದಾಗಿರುವ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ.
ರೇಣುಕ ಸ್ವಾಮಿ ಕುಟುಂಬಕ್ಕೆ ಈವರೆಗೂ ಸಾಂತ್ವಾನ ಹೇಳದ ಸಿಎಂ ಸಿದ್ದರಾಮಯ್ಯ,ಗೃಹ ಸಚಿವ ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸ ಚಿವ ಡಿ.ಸುಧಾಕರ್ ಅವರ ನಡೆ ವಿರುದ್ಧ ಟೀಕೆ ವ್ಯಕ್ತವಾಗಿದೆ. ಭಾನುವಾರ ನಗರದಲ್ಲಿ ಮಾತನಾಡಿದ್ದ ಬಾಳೆಹೊನ್ನೂರು ರಂಭಾಪುರಿ ಪೀ ಠದ ಶ್ರೀ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ‌್ಯ ಸ್ವಾಮೀಜಿ ಅವರು ಸಿಎಂ ಹಾಗೂ ಗೃಹ ಸಚಿವರ ನಿರ್ಲಕ್ಷೃದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ ಅವರು ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.