

ವಿಜಯಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಬೆಂಗಳೂರು ಅಧಿಕಾರಿಗಳ ತಂಡ ವಿಜಯಪುರ ಜಿಲ್ಲಾ ಆಸ್ಪತ್ರೆಯ ರೇಡಿಯೋಲಜಿ ವಿಭಾಗಕ್ಕೆ ಭೇಟಿ ನೀಡಿದ್ರು. ರೇಡಿಯೋಲಜಿ ಉಪನಿರ್ದೇಶಕ ಡಾ. ರಾಜೇಶ ಭೇಟಿ ಹಾಗೂ ವೈದ್ಯರ ತಂಡ ಭೇಟಿ ನೀಡಿ, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಡಾ. ಎಮ್. ಆರ್. ರಾಮಚಂದ್ರ ರೆಡ್ಡಿ ಅವರು ಮಾತನಾಡಿ ನಾವು ಕರ್ನಾಟಕದ ಎಲ್ಲ ಜಿಲ್ಲೆಗಳ ರೇಡಿಯೋಲಾಜಿ ವಿಭಾಗಕ್ಕೆ ಭೇಟಿ ಕೊಟ್ಟಿದ್ದೇವೆ . ಆದರೆ ಜಿಲ್ಲಾ ಆಸ್ಪತ್ರೆಯ ರೇಡಿಯೋಲಾಜಿ ವಿಭಾಗ ಬಹಳ ಸ್ವಚ್ಛತೆ ಹಾಗೂ ಅಚ್ಚುಕಟ್ಟುತನದಿಂದ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ತಂಡದಲ್ಲಿ ಮುಖ್ಯ ಕ್ಷ ಕಿರಣ ತಂತ್ರಜ್ಞ ನಾಗರಾಜ ಸಿ, ರೇಡಿಯೋಲಾಜಿ ಮುಖ್ಯಸ್ಥ ಅರುಲದಾಸ ಉಪಸ್ಥಿತರಿದ್ದರು. ಹಿರಿಯ ಅಧಿಕಾರಿ ಭೇಟಿ ವೇಳೆ ಜಿಲ್ಲಾಸ್ಪತ್ರೆ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಸ್. ಎಲ್. ಲಕ್ಕಣ್ಣವರ, ರೇಡಿಯೋಲಾಜಿಸ್ಟ್ ಡಾ. ಪರಶುರಾಮ ದೇವಮಾನೆ, ರೇಡಿಯೋಲಾಜಿ ಇಮ್ಯಾಜಿಂಗ್ ಅಧಿಕಾರಿಗಳಾದ ಮಠ , ಶ್ರೀಶೈಲ ವಾಘಮೋರೆ, ಪ್ರಭಾಕರ, ಕುಲಕರ್ಣಿ, ಗೀತಾ ಗಜಾಕೋಶ, ಕೌಲಗಿ ಹಾಜರಿದ್ದರು. ಜಿಲ್ಲಾಧ್ಯಕ್ಷ ಎಸ್. ಹೆಚ್. ಪಾಟೀಲ ವಂದಿಸಿದರು.