

ಚಿತ್ರದುರ್ಗ: ಐಸಿಎಸ್‌ಇ 10ನೇ ತರಗತಿ 2024-25ರ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಝೋನಲ್ ವಿಭಾಗ ಹಾಗೂ ಜಿಲ್ಲಾಮಟ್ಟದಲ್ಲೂ ಶೇ.100 ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ಚಿತ್ರದುರ್ಗ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ತನ್ನ ಮೂಡಿಗೇರಿಸಿಕೊಂಡಿದೆ.
ಶಾಲೆ ವಿದ್ಯಾರ್ಥಿಗಳಾದ ಆರ್ಯನ್‌ವೀರ್ ಶೇ.98 ಅಂಕಗಳೊಂದಿಗೆ ಝೋನಲ್ವಿಭಾಗ, ಜಿಲ್ಲೆ ಮತ್ತು ಶಾಲೆಗೆ ಪ್ರಥಮ ಹಾಗೂ ನಂತರದ ಸ್ಥಾನವನ್ನು ಜೀವನ್ ಸಿ. ಗೌಡ (ಶೇ.97)ಪಡೆದುಕೊಂಡಿದ್ದಾರೆ. ಪರೀಕ್ಷೆ ಬರೆದ ಎಲ್ಲ 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 9 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಈ ಉತ್ತಮ ಫಲಿತಾಂಶಕ್ಕಾಗಿ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಶಿಕ್ಷಕ ವೃಂದದ ಸಮರ್ಪಣಾ ಭಾವ ಈ ಸಾಧನೆಗೆ ಕಾರಣವಾಗಿದೆ. ಉತ್ತಮ ಫಲಿತಾಂಶದೊಂದಿಗೆ ಶಾಲೆ, ಪಾಲಕರಿಗೆ ಕೀರ್ತಿ ತಂದಿರುವ ಹಾಗೂ ಶಾಲೆ ಹೆಸರನ್ನು ಝೋನಲ್ ಹಾಗೂ ಜಿಲ್ಲಾಮಟ್ಟದಲ್ಲಿ ರಾರಾಜಿಸುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳು ಇತಿಹಾಸ ದಾಖಲಿಸಿರುವುದು ಹೆಮ್ಮೆಯ ಸಂಗತಿ ಎಂದು ಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸಂಸ್ಥೆ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ಟಿ.ಎಸ್. ರವಿ, ಪ್ರಾಚಾರ್ಯೆ ಎಂ.ಎಸ್. ಅರ್ಪಿತಾ, ಬೋಧಕ, ಬೋಧ ಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಪೋಟೊಗಳಿವೆ
(ಸಿಟಿಡಿ 30 ಆರ್ಯನ್ ವೀರ್)
(ಸಿಟಿಡಿ 30 ಜೀವನ್ ಸಿ.ಗೌಡ)