ರೆಡ್‌ಕ್ರಾಸ್ ಸಂಸ್ಥೆಗೆ ಶೀಘ್ರ ನಿವೇಶನ,ಡಿಸಿ

CTD 12 REDDCROSS--0004
Published on

ಚಿತ್ರದುರ್ಗ: ಜಿಲ್ಲಾರೆಡ್‌ಕ್ರಾಸ್ ಸಂಸ್ಥೆಗೆ ಶೀಘ್ರದಲ್ಲೇ ನಿವೇಶನ ಮಂಜೂರು ಮಾಡುವುದಾಗಿ ಡಿಸಿ,ಸಂಸ್ಥೆ ಅಧ್ಯಕ್ಷ ಟಿ.ವೆಂಕಟೇಶ್ ಹೇಳಿದರು. ಡಿಸಿ ಕಚೇರಿಯಲ್ಲಿ ಬುಧವಾರ ಸಂಸ್ಥೆಯಲ್ಲಿ ಮಾತನಾಡಿದ ಅವರು,ಚಿತ್ರದುರ್ಗದಲ್ಲಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ನಾನು ಈ ಹಿಂದೆ ಇ ಲ್ಲಿ ಎಸಿ ಆಗಿದ್ದಾಗಲೂ ಗಮನಿಸಿದ್ದೇನೆ. ಸಂಸ್ಥೆ ಕಚೇರಿಗೆ ಜಾಗದ ಕೊರತೆ ಇದೆ ಎಂಬುದರ ಅರಿವು ತಮಗಿದೆ ಎಂದರು.
ಚಿತ್ರದುರ್ಗದಲ್ಲಿ ರಾಹೆ 48 ಮತ್ತು 13 ಹಾದು ಹೋಗುತ್ತಿದ್ದು,ಅಪಘಾತಗಳ ಸಂಖ್ಯೆಹೆಚ್ಚಿದೆ. ಅಪಘಾತಕ್ಕೆ ಒಳಗಾದವರ ಚಿಕಿತ್ಸೆ ನಿ ಟ್ಟಿ ನಲ್ಲಿ ಸಂಸ್ಥೆ ಜವಾಬ್ದಾರಿ ಅಧಿಕವಿದೆ ಎಂದರು. ಸಂಸ್ಥೆಯ ಗಾಯತ್ರಿಶಿವರಾಂ ಮಾತನಾಡಿ,ಚಿತ್ರದುರ್ಗದ ಸಂಸ್ಥೆ ಬೆಳ್ಳಿಹಬ್ಬದ ಆಚರಣೆಯ ಲ್ಲಿದೆ. ಸಂಸ್ಥೆಗೆ ನಿವೇಶನ ಕೊರತೆ ಇದ್ದು,ಉತ್ತಮ ಜಾಗ ಮಂಜೂರುವಂತೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ಸಂಸ್ಥೆ ಕಾರ್ಯದರ್ಶಿ ಮಜಹರುಲ್ಲಾ,ಅರುಣ್‌ಕುಮಾರ್,ಮಹಮದ್‌ಆಲಿ,ಕಾರ್ತಿಕ್,ಎಸ್. ಜಿ.ಸುರೇಶ್‌ಬಾಬು,ಸುರೇಶ್,ಶಿವರಾಮ್,ಚೇತನ್,ಹನುಮಂತಪ್ಪ ಪೂಜಾರ್,ಗುರುಮೂರ್ತಿ,ಮಂಜುನಾಥ್‌ಭಾಗವತ್,ಸುರೇಶ್ ಬಾ ಫ್ನ,ಶಂಕರ್,ವೀಣಾ ಜಯರಾಮ್,ರೀನಾ,ಮಹಂತಮ್ಮ,ಹನುಮಂತರೆಡ್ಡಿ,ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net