

ಬೀದರ್: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ್ ಶಾಖೆ ಅಧ್ಯಕ್ಷರಾಗಿ ಡಾ.ವಿದ್ಯಾ ಪಾಟೀಲ್ ಹಾಗೂ ಕಾರ್ಯದರ್ಶಿಯಾಗಿ ಡಾ.ವೀರಶೆಟ್ಟಿ ಮೈಲೂರಕರ್ ಅವರನ್ನು ನೇಮಕ ಮಾಡಲಾಗಿದೆ.
ಸಂಸ್ಥೆ ರಾಜ್ಯಾಧ್ಯಕ್ಷ ವಿಜಯಕುಮಾರ ಪಾಟೀಲ್ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿದ ಶಾಖೆಯ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಬಾಲಸುಬ್ರಮಣಿಯಂ ತಿಳಿಸಿದ್ದಾರೆ.
ಹಿರಿಯ ಶಿಕ್ಷಣ ತಜ್ಞೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂಗ್ಲ ವಿಷಯದ ಪ್ರಾಧ್ಯಾಪಕಿ ಡಾ.ವಿದ್ಯಾ ಪಾಟೀಲ ಅವರನ್ನು ಶಾಖೆ ಅಧ್ಯಕ್ಷರಾಗಿ ಮತ್ತು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವೀರಶೆಟ್ಟಿ ಮೈಲೂರ್ಕರ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.