

ಕಲಬುರಗಿ: ತಾಲೂಕಿನ ಭೂಸಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರೂಪಾ ಎಂ. ಸಿದ್ಧಪಡಿಸಿದ್ದ ವಿಜ್ಞಾನ ಮಾದರಿಯು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೮ನೇ ತರಗತಿ ವಿದ್ಯಾರ್ಥಿನಿ ರೂಪಾ ಸಿದ್ಧಪಡಿಸಿದ್ದ `ಬಹುಪಯೋಗಿ ಖುರ್ಚಿ' ಮಾದರಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದೆ. ಶಿಕ್ಷಕ ಮಲ್ಲಿಕಾರ್ಜುನ ಸಿರಸಗಿ ಅವರ ಮಾರ್ಗದರ್ಶನದಲ್ಲಿ ಮಾದರಿ ಸಿದ್ಧಪಡಿಸಿದ್ದು, ರಾಷ್ಟçಮಟ್ಟದಲ್ಲಿ ಪ್ರದರ್ಶನ ನಡೆಯಲಿದೆ.
ರಾಜ್ಯ ಮಟ್ಟದಲ್ಲಿ ಐದು ಸಾವಿರ ಮಾದರಿಗಳಿದ್ದವು. ಆದರೆ ಅವುಗಳಲ್ಲಿ ೭೭ ಮಾದರಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ಭೂಸಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಆಯ್ಕೆಯಾಗಿರುವುದು ಗ್ರಾಮಕ್ಕೆ ಹೆಮ್ಮೆ ತರಿಸಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಜಮಾದಾರ, ಗ್ರಾಪಂ ಸದಸ್ಯ ಶರಣು ಮಾಲಿ ಬಿರಾದಾರ, ಅರುಣಗೌಡ ಪಾಟೀಲ್, ರತೀಶ ಭಾವಿಕಟ್ಟಿ, ಮುಖ್ಯಗುರು ಹರ್ಷ ವ್ಯಕ್ತಪಡಿಸಿದ್ದಾರೆ.