ರೂ.46 ಲಕ್ಷ ಮೌಲ್ಯದ 225 ಮೊಬೈಲ್​ ಪತ್ತೆ

police (2)
Published on

ಕಲಬುರಗಿ: ನಗರದ ಪೊಲೀಸ್​ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮರ‍್ನಾಲ್ಕು ತಿಂಗಳಿಂದ ಕಳೆದುಕೊಂಡಿದ್ದ ೨೨೫ ಮೊಬೈಲ್​ಗಳನ್ನು ಪತ್ತೆ ಹಚ್ಚಲಾಗಿದ್ದು, ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಪೊಲೀಸ್​ ಕಮಿಷನರ್​ ಡಾ.ಶರಣಪ್ಪ ಎಸ್​.ಡಿ. ಹೇಳಿದರು.

ಮೊಬೈಲ್​ ಕಳೆದ ಬಗ್ಗೆ ಇ&ಲಾಸ್ಟ್​ ಆ್ಯಪ್​ ಮೂಲಕ ದೂರು ದಾಖಲಿಸಿದ್ದರು. ಇದನ್ನು ಅನುಸರಿಸಿ ಸಿಇಐಆರ್​ ಪರ‍್ಟ್​ಲ್​ ಮೂಲಕ ತಾಂತ್ರಿಕ ತನಿಖೆ ನಡೆಸಿ, ಮೊಬೈಲ್​ ವಶಕ್ಕೆ ಪಡೆಯಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊಬೈಲ್​ ಕಳೆದ ತಕ್ಷಣ ಇ&ಲಾಸ್ಟ್​ ಆ್ಯಪ್​ ಮೂಲಕ ದೂರು ಹಾಗೂ ಸಿಇಐಆರ್​ ಪರ‍್ಟ್​ಲ್​ನಲ್ಲಿ ದಾಖಲಿಸಿದ್ದು, ಮೊಬೈಲ್​ ಹುಡುಕಲು ಅನುಕೂಲವಾಗಿದೆ. ಸದ್ಯ ೪೬ ಲಕ್ಷ ರೂ. ಮೌಲ್ಯದ ೨೨೫ ಮೊಬೈಲ್​ ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ೨೦೨೩ರ ಮರ‍್ಚ್​ ೧ರಿಂದ ಇದುವರೆಗೆ ೧೪೨೩ ಮೊಬೈಲ್​ ಹಿಂದಿರುಗಿಸಲಾಗಿದೆ. ಸಿಇಐಆರ್​ ಪರ‍್ಟ್​ಲ್​ ಆರಂಭದ ನಂತರ ಇದುರೆಗೆ ೧೬೪೮ ಮೊಬೈಲ್​ ವಾರಸುದಾರರಿಗೆ ವಾಪಸ್​ ನೀಡಲಾಗಿದೆ ಎಂದು ತಿಳಿಸಿದರು.

ಮೊಬೈಲ್​ ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು. ಸೆನ್​ ಎಸಿಪಿ ಮಾಡೊಳಪ್ಪ, ಸಬ್​ ರ‍್ಬನ್​ ಎಸಿಪಿ ಡಿ.ಜಿ.ರಾಜಣ್ಣ, ಉತ್ತರ ಎಸಿಪಿ ಚಂದ್ರಶೇಖರ, ಪಿಐಗಳಾದ ಸಂತೋಷ ತಟ್ಟೆಪಲ್ಲಿ, ಸೋಮಲಿಂಗ ಕಿರದಳ್ಳಿ ಇತರರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲಾ, ಪ್ರವಿಣ ನಾಯಕ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net