ರೂ.1.5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

ald mla
ಆಲ್ದೂರಿನ ಕೆಸರಿಕೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಗುದ್ದಲಿ ಪೂಜೆ ನೆರವೇರಿಸಿದರು. ಪೂರ್ಣೇಶ್, ಮಧು, ಜಯಣ್ಣ, ಲಕ್ಷ್ಮಣ್, ಪ್ರಶಾಂತ್ ಇತರರಿದ್ದರು.
Published on

ಆಲ್ದೂರು: ಪಟ್ಟಣ ಸುತ್ತಮುತ್ತ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೆಸರಿಕೆ, ಗಾಳಿಪೇಟೆ, ಜೋಳದಾಳು, ತೋರಣಮಾವು, ಹೆಡದಾಳು, ಮಾವಿನಗುಣಿ ರಸ್ತೆಗಳಿಗೆ ತಲಾ 50 ಲಕ್ಷದಂತೆ ಒಟ್ಟು 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಚಾಲನೆ ನೀಡಿದರು. ಆಲ್ದೂರು ಹೋಬಳಿ ಅಧ್ಯಕ್ಷ ಪೂರ್ಣೇಶ್, ಆಪ್ತ ಸಹಾಯಕ ಮಧು, ಮುಖಂಡರಾದ ಮಂಜುನಾಥ್, ಸುಲ್ತಾನ್ ಅಹಮದ್ , ಜಯಣ್ಣ, ಲಕ್ಷ್ಮಣ್, ರಮೇಶ್, ಪೂರ್ಣೇಶ್, ಪ್ರಶಾಂತ್, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net