ರುದ್ರಾಕ್ಷಿಗಳ ಪ್ರದರ್ಶನ-ಮಾರಾಟ ಮೇಳ

rudrakshi
Published on

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್ ದಮ್ಮಣಗಿ ಕಂಫರ್ಟ್ಸ್​ನಲ್ಲಿ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು ನ. 25ರವರೆಗೆ ನಡೆಯಲಿದೆ.

ಹೈದರಾಬಾದ್ ಮೂಲದ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ಮೇಳದಲ್ಲಿ ಗ್ರಾಹಕರಿಗೆ ಭೂಮಿ ಮೇಲೆ ವಿರಳವಾಗಿ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯ ಇವೆ. ಜಗತ್ತಿನಲ್ಲಿಯೇ ಅಪರೂಪದ್ದಾದ ದುಂಡುಮುಖದ ಒಂದು ಮುಖಿ ರುದ್ರಾಕ್ಷಿ ರುದ್ರಾಕ್ಷಿಗಳು ಇವೆ.

ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಶುಭದಾಯಕವಾಗಿದೆ. ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮ ನಕ್ಷತ್ರದ ಆಧಾರದ ಮೇಲೆ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ವಿಶ್ವಾಸಾರ್ಹತೆ ಹೊಂದಿದ್ದೇವೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net