

ಚಿತ್ರದುರ್ಗ: ಸ್ವಾತಂತ್ರೃ, ಸಮಾನತೆ, ಜಾತ್ಯತೀತ ಅರ್ಥ, ಮಹತ್ವದೆಡೆ ವಚನಗಳು ನಮ್ಮಲ್ಲಿ ಜಾಗೃತಿ ಮೂಡಿಸಿವೆ ಎಂದು ಶಿಕ್ಷಕ ಟಿ.ಪಿ. ಉಮೇಶ್ ಹೇಳಿದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ಭಾನುವಾರ ವಚನ ಕಮ್ಮಟ ಗೋಷ್ಠಿ-2 ರಲ್ಲಿ ಪಂಚಾಚಾರ ವಿಷಯದ ಕುರಿತು ಮಾತನಾಡಿದರು.
ಮನಸ್ಸನ್ನು ನಿಯಂತ್ರಿಸಿ, ಮಾನವ ಮಹಾದೇವನಾಗುವ ದಾರಿಯನ್ನು ಶರಣರು ತೋರಿಸಿಕೊಟ್ಟಿದ್ದಾರೆ. ಮಹಾಪಾತಕ ಕಳೆದು ಚೈತನ್ಯ ನೀಡುವ ಶಕ್ತಿ ಹೊಂದಿರುವ ರುದ್ರಾಕ್ಷಿ ಧರಿಸಿದ್ದರೆ ಯಾವ ಅಪಾಯವೂ ಎದುರಾಗದೆಂದರು.
ಹಾವೇರಿ ವೀರೇಶ್ ಹಿತ್ತಲಮನಿ ಅವರು ಪಂಚಾಚಾರಗಳ ಮಂತ್ರ ಕುರಿತು ಮಾತನಾಡಿ, ಇರುವಷ್ಟು ದಿನ ನಾವು ನಮ್ಮ ಅಂತರಂಗದ ಶುದ್ಧಿ ಕಡೆಗೆ ಗಮನ ಹರಿಸಬೇಕು, ಮನಸ್ಸಿನ ಶಾಂತಿ ಮುಖ್ಯ ಎಂದರು.
ಹೆಗ್ಗುಂದದ ಶ್ರೀ ವನಕಲ್ ಮಲ್ಲೇಶ್ವರ ಮಠದ ಡಾ.ಬಸವ ರಮಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕೃಷ್ಣಪ್ಪ ಇದ್ದರು.