ರುದ್ರಭೂಮಿಯಲ್ಲಿ ಮರಗಳ ಹನನ

7-pnp 1
Published on

ಪಾಂಡವಪುರ : ಪಟ್ಟಣದ ರುದ್ರಭೂಮಿಯಲ್ಲಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಭಾನುವಾರ ಹತ್ತಾರು ಮರಗಳನ್ನು ಹನನ ಮಾಡಲಾಗಿದೆ.ಪಟ್ಟಣದ ಬೀರಶೆಟ್ಟಹಳ್ಳಿ ಸಮೀಪದ ರುದ್ರಭೂಮಿಯಲ್ಲಿ ಬೆಳೆದು ನಿಂತಿದ್ದ ಮರಗಳನ್ನು ಸಲ್ಮಾನ್ ಎಂಬಾತ ಕಡಿದು ಕ್ರೇನ್ ಮತ್ತು ಟ್ರ್ಯಾಕ್ಟರ್ ಮೂಲಕ ಸಾಗಿಸಲು ಮುಂದಾಗಿದ್ದ. ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ಮರಗಳನ್ನು ಸಾಗಿಸದಂತೆ ತಡೆಯೊಡ್ಡಿದರು. ಬೆಳೆದು ನಿಂತಿದ್ದ ಗೊಬ್ಬಳಿ, ಬಾಗೆ, ಬೇವು, ಹೆಬ್ಬೇವು ಸೇರಿದಂತೆ ಹತ್ತಾರು ಜಾತಿಯ ಮರಗಳ ಕಡಿದು ಹಾಕಲಾಗಿದೆ. ಇದರಿಂದ ಶವಸಂಸ್ಕಾರಕ್ಕೆ ತೆರಳುತ್ತಿದ್ದವರಿಗೆ ನೆರಳಾಗಿದ್ದ ಮರಗಳು ನೆಲಕ್ಕುರಳಿಸಲಾಗಿದೆ ಎಂದು ಸ್ಥಳೀಯರು ಆಕ್ಷೇಪಿಸಿದರು.

ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಅಷ್ಟರಲ್ಲಾಗಲೇ ಕಡಿದ ಮರಗಳನ್ನು ಆರೋಪಿಗಳು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಸೋಮವಾರ ಅರಣ್ಯಾಧಿಕಾರಿಗಳು ಕಡಿದ ಮರಗಳನ್ನು ವಶಕ್ಕೆ ಪಡೆದು ಸ್ಥಳಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net