ರುದ್ರಭೂಮಿ, ಸಮುದಾಯ ಭವನಕ್ಕೆ ಸ್ಥಳ ಗುರುತಿಗೆ ಶಾಸಕ, ಸಂಸದರಿಗೆ ಮನವಿ ಸಲ್ಲಿಸಲು ನಿರ್ಧಾರ

MADIVALA MACHIDEVA
Published on

ಶಹಾಬಾದ್: ಮುಂದಿನ ದಿನಗಳಲ್ಲಿ ರುದ್ರಭೂಮಿ, ಸಮುದಾಯ ಭವನ ಹಾಗೂ ಮಡಿವಾಳೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಶಾಸಕ, ಸಂಸದ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಚಂದ್ರಕಾಂತ ಮಡಿವಾಳ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸಮಾಜದ ಅನುಕೂಲಕ್ಕಾಗಿ ರುದ್ರಭೂಮಿ, ಸಮುದಾಯ ಭವನ ಹಾಗೂ ಮಡಿವಾಳೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸುವುದಾಗಿ ಸಂಸದ ಡಾ.ಉಮೇಶ ಜಾಧವ್, ಶಾಸಕ ಬಸವರಾಜ ಮತ್ತಿಮಡು ಹಾಗೂ ಹಲವು ಅಧಿಕಾರಿಗಳು ಭರವಸೆ ನೀಡಿದ್ದು, ಇದೀಗ ಎಲ್ಲರಿಗೂ ಮನವಿ ಸಲ್ಲಿಸುವ ಮೂಲಕ ನೆನಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಪಿಎಸ್‌ಐ ಚಂದ್ರಕಾಂತ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಗೌರವ ಅಧ್ಯಕ್ಷ ರಾಜು ಮಡಿವಾಳ, ಪದಾಧಿಕಾರಿಗಳಾದ ಗುಂಡಪ್ಪ ಮಡಿವಾಳ, ಶಶಿಕಾಂತ ಮಡಿವಾಳ, ನಾಗೂ ಮಡಿವಾಳ, ಪ್ರಮುಖರಾದ ಮನೋಹರ ಮಡಿವಾಳ, ರಾಜು ಮಡಿವಾಳ ತೊನಸನಳ್ಳಿ, ಮಡಿವಾಳಪ್ಪ ಮಡಿವಾಳ, ಬಸವರಾಜ ಪರೀಟ್, ರೇವಪ್ಪ ಪರೀಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net