ರುದ್ರಭೂಮಿ ಅಭಿವೃದ್ಧಿಗೆ ಪ್ರಶಸ್ತಿಯ ನಗದು

24ss1nahadu vitarane
ಪ್ರಶಸ್ತಿಯ ಜೊತೆಯಲ್ಲಿ ಬಂದಿದ್ದ ಹಣವನ್ನು ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ಅವರು ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಿಗೆ ಹಸ್ತಾಂತರಿಸಿದರು.
Published on

ಶನಿವಾರಸಂತೆ: ಬೆಳಗಾವಿ ಬೈಲಹೊಂಗಲದಲ್ಲಿ ಇತ್ತೀಚೆಗೆ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕಿ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶನಿವಾರಸಂತೆ ಸುಪ್ರಜಾ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ಅವರು ಪ್ರಶಸ್ತಿಯ ಜತೆಯಲ್ಲಿ ನೀಡಿದ 15,000 ರೂ.ಗಳನ್ನು ದಂಡಳ್ಳಿ ಗ್ರಾಪಂ ವ್ಯಾಪ್ತಿಯ ಹಿಂದು ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ಕೆ ನೀಡಿದರು. ಸುಜಲಾದೇವಿ ಅವರು ರುದ್ರಭೂಮಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ.ಪಿ.ಶಿವಪ್ಪ ಅವರಿಗೆ ನಗದನ್ನು ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net