

ಕಲಬುರಗಿ: ನಗರದ ಲಂಗರ್ ಹನುಮಾನ ದೇವಸ್ಥಾನದ ಹತ್ತಿರ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ೬.೫೦ ಲ ರೂ. ಮೌಲ್ಯದ ೬.೯೧೫ ಕೆ.ಜಿ. ನಿಷೇಧಿತ ಗಾಂಜಾ ವಶಕ್ಕೆ ಪಡೆಯಲಾಗಿದೆ. ಉಮರ್ ಕಾಲನಿಯ ಶಹಬಾಜ ರಶೀದ್, ಚೋಟಾ ತಾಜ್ ನಗರದ ಬಾನು ಇಸ್ಮಾಯಿಲ್ ಬಂಧಿತರು.
ನಗರದ ಲಂಗರ ಹನುಮಾನ ದೇವಸ್ಥಾನದ ಹತ್ತಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಬಂಧಿಸಿ ವಿಚಾರಣೆ ನಡೆಸಿದ್ದು, ಮಹಾರಾಷ್ಟ್ರದ ಜಲಗಾಂವದಿಂದ ಗಾಂಜಾ ತಂದಿದ್ದೇವೆ. ಉಮರ್ ಕಾಲನಿಯ ಅಬ್ಬು ಶೇಖ್, ರಮೇಶ ಕಾಳೆಗೆ ಮಾರಾಟ ಮಾಡಲು ತಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಎನ್ಡಿಪಿಎಸ್ ಆ್ಯಕ್ಟ್ ಅಡಿ ಸಬ್ ರ‍್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಠಾಣೆ ಪಿಐ ಸಂತೋಷ ಎಲ್ ತಟ್ಟೆಪಳ್ಳಿ ಹಾಗೂ ಸಿಬ್ಬಂದಿ ಫಿರೋಜ್, ಶಶಿಕಾಂತ, ಮಹಾಂತೇಶ ಅವರನ್ನು ಒಳಗೊಂಡ ತಂಡ, ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಯಶಸ್ವಿ ದಾಳಿ ಕೈಗೊಂಡಿರುವುದಕ್ಕೆ ಸಬ್ ರ‍್ಬನ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.