

ಕಲಬುರಗಿ: ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ಅಮರೇಶ ಪಾಟೀಲ್ ಮನೆಯಲ್ಲಿ ಮೇ ೨೮ರಂದು ೨.೮೩ ಲಕ್ಷದ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಅಮರೇಶ ಅವರು ಅಳಿಯನಿಗೆ ಹುಷಾರಿಲ್ಲದ ಕಾರಣಕ್ಕೆ ಮುಂಬೈಗೆ ಹೋಗಿದ್ದಾಗ ಕಳ್ಳತನ ನಡೆದಿದೆ. ೫೦ ಗ್ರಾಂ ಚಿನ್ನದ ತಾಳಿ, ೬ ಗ್ರಾಂ ಉಂಗುರ, ೫ ಗ್ರಾಂನ ಎರಡು ಜತೆ ಕಿವಿಯೋಲೆ, ೨ ಗ್ರಾಂನ ಮಕ್ಕಳ ರಿಂಗ್, ೨೦ ಗ್ರಾಂನ ಬೆಳ್ಳಿಯ ಲಕ್ಷಿö್ಮÃ ಮೂರ್ತಿ, ೧೦ ಗ್ರಾಂ ಬೆಳ್ಳಿ ಗ್ಲಾಸ್, ಚಮಚಾ, ೧೭ ಸಾವಿರ ನಗದು ಕಳವಾಗಿದೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.