ರು.1.47ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲ ಕೀಲಿ ಮುರಿದು ೧.೪೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಗರದ ಸೇಡಂ ರಸ್ತೆಯ ಕಾಳನೂರ ಕುಸನೂರ ಹೌಸಿಂಗ್​ ಬರ‍್ಡ್​ನ ಮನೆಯಲ್ಲಿ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಜ್ಯೂನಿಯರ್​ ಅಸಿಸ್ಟಂಟ್​, ತಮಿಳುನಾಡಿನ ಅಕ್ಷಯರಾಜ ಮನೆಯಲ್ಲಿ ಕಳ್ಳತನ ಸಂಭವಿಸಿದೆ. ಬಾಡಿಗೆ ಮನೆಯಲ್ಲಿರುವ ಅಕ್ಷಯರಾಜ ಮನೆಗೆ ಕೀಲಿ ಹಾಕಿಕೊಂಡು ಜು.೧೯ರಂದು ಕೊಯಮತ್ತೂರಿಗೆ ಹೋಗಿದ್ದು, ಜು.೨೪ರಂದು ವಾಪಸ್​ ಬಂದಾಗ ಕೀಲಿ ಮುರಿದಿದ್ದು ತಿಳಿದಿದೆ. ಪರಿಶೀಲಿಸಿದಾಗ ಬಂಗಾರ ಲಾಕೆಟ್​, ಬೆಳ್ಳಿ ಬ್ರಾಸ್​ಲೇಟ್​, ಬೆಳ್ಳಿ ಶಂಕ, ಚಕ್ರ ಮುದ್ರೆ, ಕೈ ಗಡಿಯಾರ ಸೇರಿ ಒಟ್ಟು ೧.೪೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಗುಲ್ರ‍್ಗ ವಿವಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net