ರು.೧.೩೨ ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Crime
Published on

ಕಲಬುರಗಿ: ನಗರದ ಕುಸನುರ ರಸ್ತೆಯ ಅನ್ನಪರ‍್ಣೇಶ್ವರಿ ಕಾಲನಿಯ ಮರ‍್ಷಿ ವಿದ್ಯಾ ಮಂದಿರ ಬಳಿಯ ಮನೆಯೊಂದರಲ್ಲಿ ಮಧ್ಯರಾತ್ರಿ ಮನೆಯ ಒಳಕೊಂಡಿ ತೆಗೆದು, ೧.೩೨ ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಡೆದಿದೆ. ಶಿಕ್ಷಕಿ ಮಂಜುಳಾ ಪವಾರ ಅವರ ಮನೆಯಲ್ಲಿ ಕಳ್ಳತನವಾಗಿದೆ. ಕುಟುಂಬಸ್ಥರು ಕೂಡಿಕೊಂಡು ಶಹಾಬಾದ್​ಗೆ ಹೋಗಿದ್ದರು. ಮಂಜುಳಾ ಅವರ ಭಾವ ಮನೆಯಲ್ಲಿ ಮಲಗಿಕೊಂಡಿದ್ದು, ಮಧ್ಯರಾತ್ರಿ ಮನೆಯ ಒಳಕೊಂಡಿ ತೆಗೆದು ಬಂಗಾರದ ಉಂಗುರ, ಲಾಕೆಟ್​, ಓಲೆ, ತಾಳಿ, ಗುಂಡು, ಬೆಳ್ಳಿ ಚೈನು, ಬ್ರಾಸ್​ಲೇಟ್​, ೧೦ ಸಾವಿರ ನಗದು ಸೇರಿ ೧.೩೮ ಲಕ್ಷ ರೂ. ಮೌಲ್ಯದ ಕಳ್ಳತನ ನಡೆದಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net