ರು.5.20 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Crime_20250904001201671.jpg
Published on

ಕಲಬುರಗಿ: ಮಗಳ ಮದುವೆಗೆ ಕೂಡಿಟ್ಟ 5.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ ಟನೆ ನಂದೂರ (ಕೆ) ಗ್ರಾಮದಲ್ಲಿ ನಡೆದಿದೆ. ಧರ್ಮಪಾಲ ರಾಠೋಡ್​ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಮಗಳ ಮದುವೆಗಾಗಿ ದುಡಿದ ಹಣದಲ್ಲಿ ಬಂಗಾರ, ಬೆಳ್ಳಿ ಆಭರಣ ಹಾಗೂ ಹಣ ಕೂಡಿಟ್ಟಿದ್ದರು. ಸೆ.6ರಂದು ಮನೆಯ ಕುಟುಂಬದವರೆಲ್ಲರೂ ಒಂದು ಕೋಣೆಯಲ್ಲಿ ಮಲಗೊಂಡಿದ್ದಾರೆ. ರಾತ್ರಿ ಮೂರು ಗಂಟೆ ಸುಮಾರಿಗೆ ನೋಡಿದ್ದಾಗ ಕಳ್ಳತನ ಆಗಿದ್ದು, ತಿಳಿದಿದ್ದು, ಕೋಣೆಯ ಅಲಮಾರಿಯಲ್ಲಿದ್ದ ಬಂಗಾರದ ಮಂಗಳಸೂತ್ರ, ಬೋರಮಳ ಸರಾ, ಮುಗಿನ ರಿಂಗ್​, ಟೊಂಕಕ್ಕೆ ಹಾಕುವ ಡಾಬಾ ಸೇರಿ ಮೂರು ಲಕ್ಷ ರೂ. ನಗದು ಸೇರಿ 5.20 ಲಕ್ಷ ರೂ. ಮೌಲ್ಯದ್ದು ಕಳ್ಳತನವಾಗಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net