

ಕಲಬುರಗಿ: ಮನೆ ಬೀಗ ಮುರಿದು ೧೮.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಗರದ ಹೀರಾಪುರ ರೈಲ್ವೆ ಗೇಟ್ ಹತ್ತಿರದ ಪ್ರಕೃತಿ ಕಾಲನಿಯ ಕ್ಯೂಪಿ ಲೇಔಟ್ನಲ್ಲಿ ನಡೆದಿದೆ. ರವಿಚಂದ್ರ ಪುಟಗಿ ಮನೆಯಲ್ಲಿ ಕಳ್ಳತನ ನಡೆದಿದೆ. ಖಾಸಗಿ ೈನಾನ್ಸ್ನಲ್ಲಿ ಪಡೆದ ಸಾಲ ತೀರಿಸಲು ಸ್ನೇಹಿತರ ಬಳಿ ಕೈಗಡ ಪಡೆದ ೧೮.೧೦ ಲಕ್ಷ ರೂ. ಮನೆಯ ಅಲಮಾರಾದಲ್ಲಿಟ್ಟು, ಸಂಬಂಧಿಕರ ಮನೆಗೆ ಕುಟುಂಬಸ್ಥರೆಲ್ಲರೂ ಕೂಡಿ ಮೇ ೨೦ರಂದು ಹೋಗಿದ್ದಾರೆ. ಮರುದಿನ ಮೇ ೨೧ರಂದು ಬೆಳಗ್ಗೆ ರವಿಚಂದ್ರ ಸಹೋದರ ಮನೆ ಬಾಗಿಲು ನೋಡಿದಾಗ ಕಳ್ಳತನವಾಗಿರುವುದು ತಿಳಿದಿದೆ. ಅಲಮಾರಾದಲ್ಲಿದ್ದ ೧೮.೧೦ ಲಕ್ಷ ರೂ. ನಗದು ಮತ್ತು ೪೦ ಸಾವಿರ ರೂ. ಮೌಲ್ಯದ ಬೆಳ್ಳಿಯ ಸಾಮಾನು ಕಳ್ಳತನ ಮಾಡಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.